Connect with us

ಇಂದಿನ ಕಾರ್ಯಕ್ರಮ

ಪುತ್ತೂರು ಬಿಜೆಪಿ ಯುವ ಮೋರ್ಚಾ ವತಿಯಿಂದ ಹರ್ ಘರ್ ತಿರಂಗಾ ಅಭಿಯಾನ

Published

on

ಪುತ್ತೂರು. ಆ.15. 79 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳೊಂದಿಗೆ ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸೂಚನೆಯಂತೆ ಹರ್ ಘರ್ ತಿರಂಗಾ ಅಭಿಯಾನ ದಿನಾಂಕ 14/08/2025 ರಂದು – ರಾಷ್ಟ್ರ ಧ್ವಜ ವಿತರಣೆ ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ ಮಂಡಲ ಮತ್ತು ನಗರ ಮಂಡಲ ಪುತ್ತೂರು ವತಿಯಿಂದ ನಡೆಯಿತು.

ಈ ಕಾರ್ಯಕ್ರಮದಲ್ಲಿ ನಗರ ಮಂಡಲದ ಅಧ್ಯಕ್ಷರಾದ ಶಿವಾನಂದ್ ಕಳ್ಳಿಮಾರ್ ಹಾಗೂ ಯುವ ಮೋರ್ಚಾ ಗ್ರಾಮಾಂತರ ಮತ್ತು ನಗರ ಮಂಡಲದ ಅಧ್ಯಕ್ಷರುಗಳಾದ ಶಿಶಿರ್ ಪೆರ್ವೋಡಿ ಮತ್ತು ನಿತೇಶ್ ಕಲ್ಲೇಗ, ಪಕ್ಷದ ಪ್ರಮುಖರು, ಯುವ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಬ್ರಹ್ಮನಗರ ಕಾಲೋನಿ, ಕೋರ್ಟ್ ರೋಡ್, ಪ್ರಗತಿ ಶಿಕ್ಷಣ ಸಂಸ್ಥೆ ಹಾಗೂ ಹಲವು ಕಡೆಗಳಲ್ಲಿ 500ಕ್ಕೂ ಹೆಚ್ಚು ರಾಷ್ಟ್ರಧ್ವಜ ವಿತರಿಸಲಾಯಿತು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version