Connect with us

ಇತರ

ನನ್ನಿಂದ ತಪ್ಪಾಗಿದೆ, ಇಲ್ಲಿಗೆ ಸಾಕು, ಧರ್ಮಸ್ಥಳ ಕ್ಷೇತ್ರಕ್ಕೆ, ಜನತೆಗೆ ಕ್ಷಮೆ ಕೇಳಿದ ಸುಜಾತಾ ಭಟ್

Published

on

ಬೆಂಗಳೂರು (ಆ.22) ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದ ಜೊತೆ ಸುಜಾತಾ ಭಟ್ ದೂರು ಕೋಲಾಹಲ ಸೃಷ್ಟಿಸಿತ್ತು. ತನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ ಸುಜಾತಾ ಭಟ್ ಪ್ರಕರಣ ದೇಶಾದ್ಯಂತ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಈ ಪ್ರಕರಣ ಎಸ್ಐಟಿಗೆ ಹಸ್ತಾಂರವಾಗುತ್ತಿದ್ದಂತೆ ಒಂದೊಂದೆ ನಾಟಕ ಬಯಲಾಗುತ್ತಿದೆ. ಇದರ ಹಿಂದಿನ ಒಬ್ಬೊಬ್ಬ ಸೂತ್ರಧಾರರು ಜೈಲು ಸೇರುತ್ತಿದ್ದಾರೆ. ಇದೀಗ ಸುಜಾತಾ ಭಟ್, ತಾನು ಹೇಳಿದ ಮಗಳು ಅನನ್ಯಾ ಭಟ್ ಕತೆ ಸಂಪೂರ್ಣ ಸುಳ್ಳು ಎಂದಿದ್ದಾರೆ. ಗಿರೀಶ್ ಮಟ್ಟಣ್ಣನವರ್ ಹಾಗೂ ಟಿ ಜಯಂತ್ ಹೇಳಿದ ರೀತಿ ನಾನು ಸುಳ್ಳು ಹೇಳಿದೆ. ದಯವಿಟ್ಟು ಕ್ಷಮಿಸಿ, ನನ್ನಿಂದ ತಪ್ಪಾಗಿದೆ. ಧರ್ಮಸ್ಥಳ ಕ್ಷೇತ್ರಕ್ಕೆ, ಕರ್ನಾಟಕ ಜನತೆಗೆ, ದೇಶದ ಜನತೆಯಲ್ಲಿ ಕ್ಷಮೆಯಾಚಿಸುತ್ತಿದ್ದೇನೆ ಎಂದು ಸುಜಾತಾ ಭಟ್ ಇನ್‌ಸೈಟ್ ರಶ್ ಎಂಬ ಖಾಸಗಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕರ್ನಾಟಕ ಜನತೆಗೆ ಸುಳ್ಳು ಹೇಳಿದ್ದೇನೆ. ನಾನು ಕ್ಷಮೆ ಕೋರುತ್ತಿದ್ದೇನೆ. ಧರ್ಮಸ್ಥಳಕ್ಕೆ, ಇಲ್ಲಿಗೆ ನನ್ನನ್ನು ಮುಕ್ತಿಗೊಳಿಸಿ. ನನ್ನ ಜೀವನವನ್ನು ನಾನು ರೂಢಿಸಿಕೊಂಡು ಹೋಗುತ್ತಿದ್ದೇನೆ. ದಯವಿಟ್ಟು ಕ್ಷಮಿಸಿ ಎಂದು ಸುಜಾತಾ ಭಟ್ ಸಂದರ್ಶನದಲ್ಲಿ ಹೇಳಿದ್ದಾರೆ. ಈ ವಯಸ್ಸಿನಲ್ಲಿ ನನಗೆ ಬೇಡವಾಗಿತ್ತು. ಇಲ್ಲಿಗೆ ಸಾಕು ಎಂದು ಸುಜಾತಾ ಭಟ್ ಹೇಳಿದ್ದಾರೆ.

ಅನನ್ಯಾ ಭಟ್ ಕಾಲ್ಪನಿಕ ಮಗಳನ್ನು ಸೃಷ್ಟಿಸುವಂತೆ ಗಿರೀಶ್ ಮಟ್ಟಣ್ಣನವರ್ ಹೇಳಿಕೊಟ್ಟರು. ಅವರು ಹೇಳಿದಂತೆ ನಾನು ಹೇಳಿದೆ. ಆದರೆ ಈ ಪ್ರಕರಣ ಈ ರೀತಿ ಪ್ರೊಪಗಾಂಡ ಮಾಡಲಾಗಿದೆ ಅನ್ನೋದು ಗೊತ್ತಿರಲಿಲ್ಲ. ನನ್ನನ್ನು ಕ್ಷಮಿಸಿ ಎಂದು ಇನ್‌‌ಸೈಟ್‌ರಶ್ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version