Published
6 months agoon
By
Akkare News
ಬೆಂಗಳೂರು . ಸೆ.12 : ಕರ್ನಾಟಕ ರಾಜ್ಯದ ಸಾರಿಗೆ ಇಲಾಖೆಯಲ್ಲಿ 2019 ರಿಂದ ಅನ್ವಯವಾಗುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯ, ನವದೆಹಲಿ ರವರ ನಿರ್ದೇಶನದನುಸಾರ NIC ರವರ ಅಭಿವೃದ್ಧಿಪಡಿಸಿರುವ ಕೇಂದ್ರಿಕೃತ ವೆಬ್ ಆಧಾರಿತ ವಾಹನ್ ತಂತ್ರಾಂಶವನ್ನು ರಾಜ್ಯದ ಎಲ್ಲಾ ಅಧೀನ RTO ಕಛೇರಿಗಳಲ್ಲಿ ಅಳವಡಿಸಿ ಬಳಸಲಾಗುತ್ತಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯ, ನವದೆಹಲಿ ರವರ ನಿರ್ದೇಶನದನುಸಾರ ವಾಹನ್ ತಂತ್ರಾಂಶದಲ್ಲಿ ವಾಹನದ Horse Power, Cubic Capacity, Wheelbase, Cost of the Vehicle / ថថ ៨ក (Parameter) ನಮೂದಾಗದಿದ್ದ ಪಕ್ಷದಲ್ಲಿ ಅಂತಹ ಮಾನದಂಡಗಳನ್ನು ವಾಹನ್ ತಂತ್ರಾಂಶದಲ್ಲಿ ನಮೂದಿಸುವಂತೆ ತಿಳಿಸಿರುವ ಕಾರಣ, NIC ರವರು ಸದರಿ ಮಾನದಂಡಗಳನ್ನು ನಮೂದಿಸುವ ಸಂಬಂಧ ತಂತ್ರಾಂಶದಲ್ಲಿ ಸೂಕ್ತ ಮಾರ್ಪಾಡು ಮಾಡಿರುತ್ತಾರೆ. ಕಾರಣ, ವಾಹನ್ ತಂತ್ರಾಂಶದಲ್ಲಿ ಅಂತಹ ವಾಹನಗಳ Clearance Certificate (CC) / No Objection Certificate (NOC) (Transactions) ಸಾಧ್ಯವಾಗುತ್ತಿರುವುದಿಲ್ಲ.
ಆದುದರಿಂದ ಆರ್‌ಟಿಓ ಕಚೇರಿಗಳಲ್ಲಿ ವಾಹನಗಳಿಗೆ Clearance Certificate (CC) / No Objection Certificate (NOC) ವಹಿವಾಟು (Transactions) ಕೋರಿ ಅರ್ಜಿ ಸಲ್ಲಿಸಿರುವ ಸಲ್ಲಿಸುವ ವಾಹನಗಳ ಮಾಲೀಕರುಗಳಿಗೆ ಈ ಮೂಲಕ ತಿಳಿಸುವುದೇನೆಂದರೆ ತಮ್ಮ ಮಾಲೀಕತ್ವದ ವಾಹನಗಳಿಗೆ ಸಂಬಂಧಿಸಿದಂತೆ ಲಭ್ಯವಿರುವ ಮಾಹಿತಿ । ದಾಖಲಾತಿಗಳನ್ನು ಕೂಡಲೇ ಸಂಬಂಧಪಟ್ಟ RTO ಕಛೇರಿಗಳಿಗೆ ಹಾಜರುಪಡಿಸಿ ವಾಹನದ ಮಾಹಿತಿಯನ್ನು Update ಮಾಡಿಕೊಳ್ಳಲು ತಿಳಿಸಲಾಗಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (RTO) ತಾವು ನೀಡುವ ಮಾಹಿತಿ / ದಾಖಲಾತಿಗಳನ್ನು ಕಛೇರಿಯಲ್ಲಿರುವ ಮೂಲ ದಾಖಲಾತಿಗಳೊಂದಿಗೆ ತಾಳೆ ಮಾಡಿ ವಾಹನದ ವಿವರ / ಮಾಹಿತಿಗಳನ್ನು ಕೇಂದ್ರ ಸರ್ಕಾರವು NIC ರವರ ಮೂಲಕ ಅಭಿವೃದ್ಧಿಪಡಿಸಿರುವ ವಾಹನ್ ತಂತ್ರಾಂಶದಲ್ಲಿ Update ಮಾಡಿದ ನಂತರ CC/NOC ವಹಿವಾಟಿಗೆ ತಂತ್ರಾಂಶದಲ್ಲಿ ಅನುವು ಮಾಡಿಕೊಡುವುದರಿಂದ ವಾಹನ ಮಾಲೀಕರು ಸಹಕರಿಸಬೇಕಾಗಿ ವಿನಂತಿಸಲಾಗಿದೆ