Published
5 months agoon
By
Akkare News
ಪಂಜ: ದಿ:05. ರಂದು ಕಲರ್ಸ್ ಈಗಲ್ಸ್ ಪಂಜ ವತಿಯಿಂದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟವು ಕೋಟಿ ಚೆನ್ನಯ ಕ್ರೀಡಾಂಗಣ ನಾಗತೀರ್ಥ ಪಂಜದಲ್ಲಿ ನಡೆಯಿತು ಕಲರ್ಸ್ ಈಗಲ್ಸ್ ಪಂಜ ಇದರ ಮಾಲಕರಾದ ಭರತ್ ಕೊಟ್ರಂಜ ಇವರ ಅಧ್ಯಕ್ಷತೆಯಲ್ಲಿ ಕೆಂಚಪ್ಪ ಗೌಡ ನೆಕ್ಕಿಲ ಇವರು ಕ್ರಿಕೆಟ್ ಪಂದ್ಯಾಟದ ಉದ್ಘಾಟಿಸಿದರು.
ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭವು ಸಂಜೆ 5:30ಕ್ಕೆ ನಡೆಯಿತು , ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಲರ್ಸ್ ಈಗಲ್ಸ್ ಪಂಜದ ಮಾಲಕರಾದ ಭರತ್ ಕೊಟ್ರಂಜ ಇವರು ವಹಿಸಿದ್ದರು, ಸಭಾ ಕಾರ್ಯಕ್ರಮದ ಅತಿಥಿಗಳಾಗಿ ದೇವಿಪ್ರಸಾದ್ ಕಾನತ್ತೂರು ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಪಂಜ, ಪವನ್ ಪಲ್ಲತ್ತಡ್ಕ ಅಧ್ಯಕ್ಷರು ಯುವಜನ ಸಂಯುಕ್ತ ಮಂಡಳಿ ಸುಳ್ಯ, ಹಿತೇಶ್ ಪಂಜದಬೈಲು ಅಧ್ಯಕ್ಷರು ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್(ರಿ.), ತೀರ್ಪುಗಾರರಾದ ಜನಾರ್ಧನ ನಾಗತೀರ್ಥ ಕ್ರೀಡಾ ಕಾರ್ಯದರ್ಶಿ ಯುವಜನ ಸಂಯುಕ್ತ ಮಂಡಳಿ ಸುಳ್ಯ, ಎಂ.ಡಿ ಪ್ರಶಾಂತ್, ವರ್ಷಿತ್ ಪಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಯತೀಶ್ ನಾಗತೀರ್ಥ ಇವರು ಸ್ವಾಗತಿಸಿದರು, ಜೀವನ್ ಜಳಕದಹೊಳೆ ಇವರು ವಂದಿಸಿದರು, ಪುರಂದರ ಶೆಟ್ಟಿ ನಾಗತೀರ್ಥ ಇವರು ನಿರೂಪಿಸಿದರು.