Published
5 months agoon
By
Akkare News
ಪುತ್ತೂರು ಅ.05. ಅಶೋಕ್ ಕುಮಾರ್ ರೈ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಳಕೆ ಮಜಲು ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಅಶೋಕ ಜನಮನ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ಜಯಪ್ರಕಾಶ್ ಬದಿನಾರ್ ಮಾತನಾಡಿ ಅಶೋಕ ಜನಮನ ಕಾರ್ಯಕ್ರಮಕ್ಕೆ ಗ್ರಾಮಸ್ಥರನ್ನು ಆಹ್ವಾನಿಸಿದರು.
ಕಾರ್ಯಕ್ರಮದಲ್ಲಿ ಶ್ರಿರಾಜರಾಮ್ ಶೆಟ್ಟಿ ಕೋಲ್ಪೆ ಮಾತನಾಡಿ ಅಶೋಕ್ ಕುಮಾರ್ ರೈ ಕಾರ್ಯಕ್ರಮಕ್ಕೆ ನಮ್ಮ ಶಾರದಾಂಬ ಭಜನಾ ಮಂದಿರದ ವತಿಯಿಂದ ಎಲ್ಲರೂ ಈ ಕಾರ್ಯಕ್ರಮಕ್ಕೆ ಬರುತ್ತೇವೆಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಶ್ರೀ ರಾಜಾರಾಮ್ ಶೆಟ್ಟಿ ಕೋಲ್ಪೆ ಗುತ್ತು.ಶ್ರೀ ಜಯಪ್ರಕಾಶ್ ಬದಿನಾರ್ ಶ್ರಿ ಕೃಷ್ಣಕಿಶೋರ್ ಭಟ್ ಪೆಲತ್ತಿಂಜ.ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಶ್ರಿರಾಮಣ್ಣ ಪಿಲಿಂಜ ಶ್ರೀ ಮೋಹನ್ ಗುರ್ಜಿನಡ್ಕ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಅಳಕೆ ಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮೋಹನ್ ಗುರ್ಜಿನಡ್ಕ ಸ್ವಾಗತಿಸಿ ಪ್ರವೀಣ್ ಕುಮಾರ್ ಶೆಟ್ಟಿ ವಂದಿಸಿದರು.