Published
5 months agoon
By
Akkare News
ಪುತ್ತೂರು: ಅ.20 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ಅಶೋಕ ಜನಮನ 2025 ಕಾರ್ಯಕ್ರಮ ನಡೆಯಲಿದೆ.
ಇದರ ಸಿದ್ದತೆ, ಭದ್ರತಾ ದೃಷ್ಟಿಯಿಂದ ಪರಿಶೀಲಿಸುವ ನಿಟ್ಟಿನಲ್ಲಿ ಹಾಗೂ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸಿದ್ದತಾ ಸ್ಥಳ ಪರಿಶೀಲನೆ ನಡೆಯಿತು.
‘ಜಿಲ್ಲಾ ಎಸ್ ಪಿ ಅರುಣ್ ಕುಮಾರ್, ಡಿವೈಎಸ್ಪಿ ಅರುಣ್ ನಾಗೇಗೌಡ, ಪುತ್ತೂರು ಸರ್ಕಲ್ ಇನ್ಸ್ ಪೆಕ್ಟರ್ ಜಾನ್ಸನ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.