Published
3 months agoon
By
Akkare News
ಬಂಟ್ವಾಳ: ವೀರಕಂಭ ಗ್ರಾಮದ ಪಾತ್ರತೋಟ ಪ್ರದೇಶದಲ್ಲಿ ಅಕ್ರಮ ಕೋಳಿ ಅಂಕದ ಜೂಜಾಟ ನಡೆಯುತ್ತಿದೆ ಎಂಬ ವಿಶ್ವಸನೀಯ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸರಿಂದ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ನ.30ರಂದು ಸಂಜೆ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ಬಿ.ಎಸ್. ನಾಯಕ್ ಅವರ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿದಾಗ, ಸಾರ್ವಜನಿಕ ಗುಡ್ಡೆಯೊಂದು ಪ್ರದೇಶದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕದ ಜೂಜಾಟದಲ್ಲಿ ತೊಡಗಿದ್ದವರು ಎಂಬುದು ದೃಶ್ಯವಾಗಿತ್ತು. ಪೊಲೀಸರು ಧಾಳಿ ನಡೆಸುತ್ತಿದ್ದಂತೆಯೇ ಕೆಲವರು ಪರಾರಿಯಾಗಿದ್ದು, ಮೂವರು ವ್ಯಕ್ತಿಗಳನ್ನು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದವರು:
ತಪಾಸಣೆಯಲ್ಲಿ ಜೂಜಾಟಕ್ಕೆ ಬಳಸಿದ ರೂ.2,100 ನಗದು, ಐದು ಕೋಳಿಗಳು, ಕೋಳಿ ಅಂಕಕ್ಕೆ ಬಳಸುವ ಕತ್ತಿ ಹಾಗೂ ದಾರಗಳು ಪತ್ತೆಯಾಗಿವೆ. ಎಲ್ಲಾ ವಸ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.