Published
3 months agoon
By
Akkare News
ತುಮಕೂರು, ಡಿ. 07 : ಎಟಿಎಂನಲ್ಲಿರುವ ಹಣ ಕದಿಯಲು ಯತ್ನಿಸಿದ ಖತರ್ನಾಕ್ ಕಳ್ಳರ ತಂಡವೊಂದು ಯಂತ್ರವನ್ನೇ ಕಳವು ಮಾಡಲು ಬಂದಾಗ ಅದರ ಭಾರ ತಡೆಯಲಾಗದೆ, ಮಷಿನ್‌ನ್ನು ರಸ್ತೆ ಮಧ್ಯೆಯೇ ಬಿಟ್ಟು ಓಡಿ ಹೋಗಿರುವ ವಿಚಿತ್ರ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಪುರವರ ಗ್ರಾಮದಲ್ಲಿ ನಡೆದಿದೆ.
ಗುರುವಾರ ತಡರಾತ್ರಿ ಇಂಡಿಯನ್–1 ಬ್ಯಾಂಕ್‌ನ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರು ಮೊದಲಿಗೆ ಯಂತ್ರದೊಳಗಿನ ನಗದು ಕದಿಯಲು ಪ್ರಯತ್ನಿಸಿದ್ದಾರೆ. ಹಣ ತೆಗೆಯಲು ಸಾಧ್ಯವಾಗದ ನಂತರ ಎಟಿಎಂ ಮಷಿನ್‌ನ್ನೇ ಎತ್ತಿಕೊಂಡು ಹೋಗಲು ಯತ್ನಿಸಿದರೂ, ಯಂತ್ರದ ತೂಕ ಹೆಚ್ಚಿರುವುದರಿಂದ ಅದನ್ನು ಸಾಗಿಸಲು ಸಾಧ್ಯವಾಗದೇ ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.