Connect with us

ಇತರ

KSCA ಚುನಾವಣೆಯಲ್ಲಿ ವೆಂಕಟೇಶ್ ಪ್ರಸಾದ್ ಬಣಕ್ಕೆ ಭರ್ಜರಿ ಜಯ. ಬ್ರಿಜೇಶ್ ಪಟೇಲ್ ಗೆ ತೀವ್ರ ಮುಖಭಂಗ

Published

on

ಬೆಂಗಳೂರು.ಡಿ.09: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಬಣಕ್ಕೆ ಭರ್ಜರಿ ಜಯ ಸಿಕ್ಕಿದ್ದು, ಮೈಸೂರು ಪ್ರಿಂಟರ್ಸ್ (ಪ್ರಜಾವಾಣಿ) ಕೆಎನ್ ಶಾಂತಕುಮಾರ್ ಬಣಕ್ಕೆ ಸೋಲಾಗಿದೆ. , ಒಟ್ಟು 16 ಹುದ್ದೆಗಳಲ್ಲಿ 11 ಹುದ್ದೆ ವೆಂಕಟೇಶ್ ಪ್ರಸಾದ್ ತಂಡದ ಪಾಲಾಗಿದೆ.

749 ಮತ ಪಡೆದ ವೆಂಕಟೇಶ್ ಪ್ರಸಾದ್, ಗೆಲುವಿನ ನಗೆ ಬಿರಿದ್ದಾರೆ. ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದ ಪ್ರಜಾವಾಣಿ ಯ ಶಾಂತಕುಮಾರ್ 558 ಮತಗಳನ್ನು ಪಡೆದು, ಸೋಲನ್ನಪ್ಪಿದ್ದಾರೆ.

ಸುಜಿತ್ ಸೋಮಸುಂದರ್ (719) ಕೆಎಸ್‌ಸಿಎ ಉಪಾಧ್ಯಕ್ಷ,. ಬಿ‌ಕೆ ರವಿ (669) ಜಂಟಿ ಕಾರ್ಯದರ್ಶಿ,. ಬಿಎನ್ ಮಧುಕರ್(736) ಖಜಾಂಚಿ. ಕಾರ್ಯದರ್ಶಿಯಾಗಿ ಸಂತೋಷ್ ಮೆನನ್ (675) ಆಯ್ಕೆ.

ಕೆ.ಎನ್. ಶಾಂತ್ ಕುಮಾರ್ ನೇತೃತ್ವದ ಟೀಂ (ಟೀಂ ಬ್ರಿಜೇಶ್):
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಕೆ.ಎನ್. ಶಾಂತ್ ಕುಮಾರ್ (ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ), ಎ.ಇ. ಜೈರಾಂ (ಕಾರ್ಯದರ್ಶಿ), ಬಿ.ಕೆ. ರಾವಿ (ಜೊತೆ ಕಾರ್ಯದರ್ಶಿ), ಬಿ.ಎನ್. ಮಧುಕರ್ (ಕೋಶಾಧಿಕಾರಿ).

ವೆಂಕಟೇಶ ಪ್ರಸಾದ್ ತಡಕ್ಕೆ ಬೆಂಬಲ: ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಶಾಂತಾ ರಂಗಸ್ವಾಮಿ, ವಿನಯ್ ಮೃತ್ಯುಂಜಯ


Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version