Connect with us

ಇತರ

ಉಂಡ ಮನೆಗೆ ಕನ್ನ ಕೊರೆದ ಬ್ಯಾಂಕ್ ಮ್ಯಾನೇಜರ್ . ಬ್ಯಾಂಕ್ ಆಫ್ ಬರೋಡ ಪೆರ್ನೆ ಶಾಖೆಯ 70 ಲಕ್ಷ ಹಣ ಚಿನ್ನಾಭರಣ ಜೊತೆ ಪರಾರಿ

Published

on

ಬಂಟ್ವಾಳ : ತಾಲೂಕು ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯ ಮ್ಯಾನೇಜರ್ ಸುಬ್ರಹ್ಮಣ್ಯಂ(30)ಎಂಬಾತ ಉಂಡ ಮನೆಗೆ ಕನ್ನ ಕೊರೆದು ಪರಾರಿಯಾಗಿದ್ದಾನೆ.
ಎಟಿಎಂ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದ ಈತ 06/02/2024ರಿಂದ 16/12/2025 ವರೆಗೆ ಎಟಿಎಂಗೆ ನಿಗದಿತ ಹಣ ಜಮಾ ಮಾಡದೇ 70,86,000/-ನಗದು ಮುಳುಗಿಸಿ 17/12/2025ರಂದು ಯಾರಿಗೂ ಮಾಹಿತಿ ನೀಡದೇ ಪರಾರಿಯಾಗಿದ್ದಾನೆ.

ಬ್ಯಾಂಕ್ ಮ್ಯಾನೇಜರ್ ಪರಾರಿಯಾದ ಬಗ್ಗೆ ಮಾಹಿತಿ ಪಡೆದ ಹಿರಿಯ ಅಧಿಕಾರಿಗಳು ಪೆರ್ನೆ ಶಾಖೆಗೆ 19-12-2025 ರಂದು ಬಂದು ಸೇಫ್ ಲಾಕರ್ ಪರಿಶೀಲನೆ ನಡೆಸಿದಾಗ ರೂ.55,000/- ಮೌಲ್ಯದ 4.400 ಗ್ರಾಂ ಚಿನ್ನ ವಂಚಿಸಿರುವುದು ಕೂಡಾ ಬೆಳಕಿಗೆ ಬಂದಿದೆ. ಪರಾರಿಯಾದ ಬ್ಯಾಂಕ್ ಮ್ಯಾನೇಜರ್ ಸುಬ್ರಹ್ಮಣ್ಯಂ ಎಸಗಿದ ಒಟ್ಟು ವಂಚನೆಯ ಮೌಲ್ಯ ರೂ.71,41,000/- ಆಗಿರುತ್ತದೆ ಎಂದು ಪಿರ್ಯಾದುದಾರರಾದ ಶ್ರೀ C.V.S. ಚಂದ್ರಶೇಖರ್ (50), ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ವ್ಯವಸ್ಥಾಪಕರು, ಜೆಪ್ಪು ಮಂಗಳೂರು ರವರು ದಿನಾಂಕ 23-12-2025 ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 121/2025, ಕಲಂ 314, 316(5), 318(2) BNS-2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version