Connect with us

ಇತರ

ವಿಟ್ಲ ಜಾತ್ರೆಯ ಅಂಗವಾಗಿ ಸಮರ್ಪಣ್ ವಿಟ್ಲ ಇವರಿಂದ ಜನವರಿ 16 ರಂದು ಸಮರ್ಪಣ್ ಕಲೋತ್ಸವ 2026 ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಗೌರವಾರ್ಪಣೆ,ವಿದ್ಯಾನಿಧಿ ವಿತರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ.

Published

on

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಅಂಗವಾಗಿ ಶ್ರೀ ದೇವರ ನಿತ್ಯೋತ್ಸವದಂದು ದಿನಾಂಕ – 16-01-2025 ನೇ ಶುಕ್ರವಾರದಂದು ಸಮರ್ಪಣ್ ವಿಟ್ಲ ಇವರ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಮರ್ಪಣ್ ಕಲೋತ್ಸವ -2026 ಅಂಗವಾಗಿ ಚೈತನ್ಯ ಕಲಾವಿದರು ಬೈಲೂರು ಇವರಿಂದ ರಾಘು ಮಾಸ್ಟ್ರುಎಂಬ ಹಾಸ್ಯಮಯ ತುಳು ನಾಟಕ ವಿಶೇಷ ದೃಶ್ಯ ಸಂಯೋಜನೆಯೊಂದಿಗೆ ನಡೆಯಲಿದೆ ಅಲ್ಲದೆ ಸಾಧಕರಿಗೆ ಗೌರವಾರ್ಪಣೆ, ಸಮರ್ಪಣ್ ವಿದ್ಯಾನಿಧಿ ವಿತರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ವಿಟ್ಲದ ಹಿರಿಯ ಸ್ವಯಂ ಸೇವಕರಾದ ಶ್ರೀ ಈಶ್ವರ.ಡಿ ಕೂಜಪ್ಪಾಡಿ ರವರು ಬಿಡುಗಡೆ ಮಾಡಿದರು.

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ನಾರಾಯಣ ಪ್ರಸಾದ್ ಬನ್ನಿಂತಾಯರವರು ಪ್ರಾರ್ಥನೆ ನೇರವೇರಿಸಿದರು.ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಮರ್ಪಣ್ ಸೇವಾ ಪ್ರಕಲ್ಪದಲ್ಲಿ ವಿದ್ಯಾನಿಧಿ ವಿತರಣೆ ನಡೆಯಲಿರುವುದು .

ಈ ಸಂದರ್ಭ ಸಮರ್ಪಣ್ ವಿಟ್ಲ ದ ಅಧ್ಯಕ್ಷರಾದ ಯಶವಂತ . ಎನ್ ,ಗೌರವಾಧ್ಯಕ್ಷರಾದ ಕೃಷ್ಣಯ್ಯ ಕೆ ವಿಟ್ಲ ಅರಮನೆ , ಉಪಾಧ್ಯಕ್ಷ ರಾದ ಯಾದವ ಮಡಿವಾಳಕೋಡಿ , ಸೂರಜ್ ಕೋಟ್ಯಾನ್ , ರವಿವರ್ಮ ವಿಟ್ಲ ಅರಮನೆ,ಕಾರ್ಯದರ್ಶಿಗಳಾದ ರೋಹಿತ್ ಕಟ್ಟೆ ,ಕೋಶಾಧಿಕಾರಿ ನಿಖಿಲ್ ಸಾಲ್ಯಾನ್ , ಗೌರವ ಸಲಹೆಗಾರರಾದ ಮೋನಪ್ಪ ಗೌಡ ಶಿವಾಜಿ ನಗರ ,ವಿಶ್ವನಾಥ ನಾಯ್ತೋಟ್ಟು , ಸಂಘಟನಾ ಕಾರ್ಯದರ್ಶಿ ರವಿಶಂಕರ್ ,
ಸಂಚಾಲಕರಾದ ಹರೀಶ್ ಕೆ ವಿಟ್ಲ, ಸದಸ್ಯರುಗಳಾದ , ಪವನ್ ಕಟ್ಟೆ,ಮನೋಜ್ ವಿಟ್ಲ ,ಅಭಿ ಶಿವಾಜಿ ನಗರ , ಕೀರ್ತನ್ ಸಣ್ಣಗುತ್ತು, ಪ್ರವೀಣ್ ಸಣ್ಣಗುತ್ತು , ಅನಿಲ್, ದೀಕ್ಷಿತ್ , ಗಣೇಶ್, ಕೌಶಿಕ್ , ಲಿಖಿತ್, ಪ್ರಮುಖರಾದ ವಿಟ್ಲ ಪಟ್ಟಣ ಪಂಚಾಯತ್ ನ ಸ್ಥಾಯಿ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ರವಿಪ್ರಕಾಶ್, ಪ್ರಸಾದ್ ವಿಟ್ಲ ಅರಮನೆ ,ಮೋಹನ್ ಕಟ್ಟಿ , ಕೃಷ್ಣಪ್ಪ ಪಳೇರಿ, ಶ್ರೀಮತಿ ಬೇಬಿ ನೆಕ್ಕರೆ ಕಾಡು ಮುಂತಾದವರು ಉಪಸ್ಥಿತರಿದ್ದರು.


 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version