Published
4 weeks agoon
By
Akkare News
ಅಭಿವೃದ್ಧಿಯಲ್ಲಿ ಮುಂಡೂರು ಗ್ರಾಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ-ಅಶೋಕ್ ರೈ
ಪುತ್ತೂರು: ಮುಂಡೂರು ಗ್ರಾಮ ಪಂಚಾಯತ್‌ನ ನೂತನ ಸೇವಾ ಕೇಂದ್ರ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಫೆ.5ರಂದು ಮುಂಡೂರು ಗ್ರಾಮದ ರೆನ್ಯದಲ್ಲಿ ನಡೆಯಿತು.
ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್.ಎಸ್.ಡಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪಂಚಾಯತ್‌ರಾಜ್ ಇಲಾಖೆಯ ಸಹಾಯಕ ಅಭಿಯಂತರರಾದ ಕುಶ ಕುಮಾರ್, ಮುಂಡೂರು ಗ್ರಾ.ಪಂ ಉಪಾಧ್ಯಕ್ಷೆ ಯಶೋಧ, ಪಿಡಿಓ ಜಗದೀಶ್ ನಾಯ್ಕ, ಕಾರ್ಯದರ್ಶಿ ಸೂರಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಉಮೇಶ್ ಅಂಬಟ, ದುಗ್ಗಪ್ಪ ಕೆ, ಕಮಲೇಶ್ ಎಸ್.ವಿ, ಬಾಬು ಕಲ್ಲಗುಡ್ಡೆ, ಮಹಮ್ಮದ್ ಅಲಿ, ಕರುಣಾಕರ ಗೌಡ ಎಲಿಯ, ಬಾಲಕೃಷ್ಣ ಕೆ, ರಸಿಕಾ ರೈ, ದೀಪಿಕಾ ಸಿ.ಕೆ, ಕಾವ್ಯ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಬೂಡಿಯಾರು ರಾಧಾಕೃಷ್ಣ ರೈ ಹಾಗೂ ಇನ್ನಿತರ ಹಲವಾರು ಮಂದಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳು ಸಹಕರಿಸಿದರು. ಗ್ರಾ.ಪಂ ಸಿಬ್ಬಂದಿ ಶಶಿಧರ್ ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಪಂ ಸದಸ್ಯ ಕಮಲೇಶ್ ಎಸ್.ವಿ ವಂದಿಸಿದರು.