Connect with us

ಇತರ

ಬಿಯರ್ ಪ್ರಿಯರಿಗೆ ಸಿಹಿ ಸುದ್ದಿ… ಬಿಯರ್ ಮತ್ತು ವಿಸ್ಕಿ ದರ ಕಡಿಮೆ ಮಾಡಿದ ಸರಕಾರ

Published

on

ಅಲ್ಕೊಹಾಲ್ ಇನ್ ಬೇವರೇಜ್ ನೀತಿಯಿಂದಾಗಿ ಕಡಿಮೆಯಾದ ಬೆಲೆ
 
ಬೆಂಗಳೂರು: ಅಬಕಾರಿ ತೆರಿಗೆ ಪರಿಷ್ಕರಣೆ ಬೆನ್ನಲ್ಲೇ ರಾಜ್ಯ ಸರ್ಕಾರ ಬಿಯರ್‌ ಮತ್ತು ವಿಸ್ಕಿ ಬೆಲೆ ತುಸು ಇಳಿಕೆ ಮಾಡಿ ಮದ್ಯಪ್ರಿಯರು ಖುಷಿಪಡುವ ಸುದ್ದಿ ಕೊಟ್ಟಿದೆ. ಕರ್ನಾಟಕದಲ್ಲಿ ಮೈಲ್ಡ್ ಮತ್ತು ಲಾಗರ್ ಬಿಯರ್‌ಗಳ ಬೆಲೆ ಮೇ 11ರಿಂದ ಜಾರಿಗೆ ಬರುವಂತೆ ಶೇ.20-25 ಇಳಿಕೆಯಾಗಿದೆ. ಅಬಕಾರಿ ಇಲಾಖೆ ಬಿಯರ್ ಮತ್ತು ಸ್ಪಿರಿಟ್ಸ್‌ಗಳಿಗೆ ‘ಅಲ್ಕೊಹಾಲ್ ಇನ್ ಬೇವರೇಜ್’ (AiB) ನೀತಿಯಡಿ ಹೊಸ ದರಪಟ್ಟಿಯನ್ನು ಬಿಡುಗಡೆ ಮಾಡಿದ್ದು, 5 ಶೇಕಡಾ ಆಲ್ಕೊಹಾಲ್ v/v(volume/volume) ಹೊಂದಿರುವ ಬಿಯರ್‌ಗಳ ಗರಿಷ್ಠ ಚಿಲ್ಲರೆ ಬೆಲೆ 20ರಿಂದ 25 ಶೇಕಡಾ ಕಡಿಮೆಯಾಗಿದೆ.
ಹೊಸ ದರಪಟ್ಟಿಯ ಪ್ರಕಾರ, 5 ಶೇಕಡಾ ಆಲ್ಕೊಹಾಲ್ v/v ಹೊಂದಿರುವ ಜನಪ್ರಿಯ ಮೈಲ್ಡ್ ಬಿಯರ್ ಬ್ರ್ಯಾಂಡ್‌ಗಳಾದ ಕಿಂಗ್‌ಫಿಷರ್ ಪ್ರೀಮಿಯಂ, ಕಿಂಗ್‌ಫಿಷರ್ ಅಲ್ಟ್ರಾ, ಬಡ್‌ವೈಸರ್, ಯುಬಿ ಎಕ್ಸ್‌ಪೋರ್ಟ್, ಹೈನಿಕನ್ ಮುಂತಾದ 650 ಮಿ.ಲೀ ಬಾಟಲಿಗಳ ಗರಿಷ್ಠ ಚಿಲ್ಲರೆ ದರದಲ್ಲಿ ಕ್ರಮವಾಗಿ 75 ರೂ (KF Premium, Ultra), 70 ರೂ (Heineken), 25 ರೂ (UB Export) ಮತ್ತು 20 ರೂ. (Budweiser Premium) ಇಳಿಕೆಯಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement