Connect with us

ಇತರ

ಬಂಧನದ ವೇಳೆ ಹಲ್ಲೆ ಯತ್ನ: ಗುಂಡೇಟು ನೀಡಿ ವಿಕೃತ ಕಾಮಿಯನ್ನು ಅರೆಸ್ಟ್​​ ಮಾಡಿದ ದೇವನಹಳ್ಳಿ ಪೊಲೀಸರು

Published

on

ದೇವನಹಳ್ಳಿ, ನವೆಂಬರ್​​ 28: ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಕಾರಣ ಗುಂಡಿನ ದಾಳಿ ನಡೆಸಿ ವಿಕೃತ ಕಾಮಿಯೋರ್ವನನ್ನು ಬಂಧಿಸಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತರಹುಣಸೆಯ ಟೆರ್ರಾಫಾರಂ ಬಳಿ ನಡೆದಿದೆ. ಆಂಧ್ರದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ನಿವಾಸಿ ಬೆಟ್ಟ ನರೇಶ್ ಬಂಧಿತ ಆರೋಪಿಯಾಗಿದ್ದು, ನರೇಶ್ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಅರೆಸ್ಟ್​​ ಮಾಡಿದ್ದಾರೆ. ಮಹಿಳೆಯರ ಜೊತೆ ಅಸಭ್ಯವಾಗಿ ವರ್ತನೆ, ಅತ್ಯಾಚಾರ ಯತ್ನ ಸೇರಿ ಆರೋಪಿ ವಿರುದ್ಧ 15ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದವು ಎನ್ನಲಾಗಿದೆ.

ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಆರೋಪಿ ಬೆಟ್ಟ ನರೇಶ್​​ನ ಬಂಧನಕ್ಕಾಗಿ ಪೊಲೀಸರು ತೆರಳಿದ್ದರು. ಆದರೆ ಈ ವೇಳೆ ಮೊಂಡಾಟ ತೋರಿರುವ ಆತ ಅವರ ಮೇಲೆಯೇ ಹಲ್ಲೆಗೆ ಯತ್ನ ನಡೆಸಿದ್ದಾನೆ. ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು‌ ಹಾರಿಸಿ ವಾರ್ನಿಂಗ್ ನೀಡಿದರೂ ಎಚ್ಚೆತ್ತುಕೊಳ್ಳದ ಆರೋಪಿ ಅಟ್ಯಾಕ್​​ ಮಾಡಿ ಎಸ್ಕೇಪ್​​ ಆಗಲು ಯತ್ನಿಸಿದ್ದಾನೆ. ಹೀಗಾಗಿ ಆತ್ಮರಕ್ಷಣೆಯ ಅನಿವಾರ್ಯತೆಯಿಂದಾಗಿ ಚಿಕ್ಕಜಾಲ ಪೊಲೀಸ್​​ ಇನ್​​​ಸ್ಪೆಕ್ಟರ್​ ಮಲ್ಲಿಕಾರ್ಜುನ್​​ ಅವರು ಫೈರಿಂಗ್​​ ಮಾಡಿದ್ದಾರೆ. ನರೇಶ್​​ ಕಾಲಿಗೆ ಗುಂಡು ತಾಗಿದೆ. ಆರೋಪಿ ಮತ್ತು ಗಾಯಗೊಂಡ ಪೊಲೀಸರಿಗೆ ಯಲಹಂಕ‌ ಬಳಿಯ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಡಿಸಿಪಿ ಮಿಥುನ್ ಕುಮಾರ್ ಭೇಟಿ ನೀಡಿದ್ದಾರೆ. ಇನ್ನು ವಿಕೃತ ಕಾಮಿಯಾಗಿರುವ ಈ ನರೇಶ್​​, ಮಹಿಳೆಯರ‌‌ ಪಿಜಿಗೆ ನುಗ್ಗಿ ಖಾಸಗಿ ಅಂಗ ಪ್ರದರ್ಶನ ಮಾಡ್ತಿದ್ದ. ನಿನ್ನೆಯೂ ಚಿಕ್ಕಜಾಲ ಮತ್ತು ಯಲಹಂಕದಲ್ಲಿನ‌ ಖಾಸಗಿ ಮಹಿಳಾ ಪಿಜಿಗಳಿಗೆ ನುಗ್ಗಿದ್ದ ಈತ ಇದೇ ರೀತಿ ಮಾಡಿ ಮೊಬೈಲ್ ಕಸಿದುಕೊಂಡಿದ್ದ. ಒರ್ವ ಯುವತಿಯ ಮೇಲೆ ಅತ್ಯಾಚಾರಕ್ಕೂ ಯತ್ನಿಸಿದ್ದ. ಒಂದೇ ದಿನ ನಡೆದ ಎರಡು ಪ್ರಕರಣದಿಂದ‌ ಪಿಜಿಯಲ್ಲಿನ ಯುವತಿಯರು ಬೆಚ್ವಿಬಿದ್ದಿದ್ದರು. ಘಟನೆ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಆರೋಪಿಯ ಬೆನ್ನು ಬಿದ್ದಿದ್ದರು. ದೇವನಹಳ್ಳಿ ಎಸಿಪಿ ಶ್ರೀಹರ್ಷ ನೇತೃತ್ವದಲ್ಲಿ ನರೇಶ್​​ ಬಂಧನಕ್ಕೆಂದು ತೆರಳಲಾಗಿತ್ತು. ಆದರೆ ಆರೋಪಿ ಪೊಲೀಸರ ಮೇಲೆಯೇ ದಾಳಿಗೆ ಮುಂದಾದ ಕಾರಣ ಗುಂಡೇಟು ನೀಡಿ ಅರೆಸ್ಟ್​​ ಮಾಡಲಾಗಿದೆ.​​

9 ದಿನಗಳ ಹಿಂದಷ್ಟೇ ಜೈಲಿನಿಂದ ಬಂದಿದ್ದ ಆರೋಪಿ

ಆರೋಪಿ ನರೇಶ್​​ ಕಳೆದ 9 ದಿನಗಳ ಹಿಂದಷ್ಟೇ ಆಂಧ್ರದ ಮದನಪಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ. ಹೀಗಿದ್ದರೂ ಬುದ್ಧಿ ಕಲಿಯದ ಆತ ಬೆಂಗಳೂರಿಗೆ ಬಂದು ಮತ್ತೆ ಅಂತಹುದ್ದೇ ಕೆಲಸ ಮಾಡುತ್ತಿದ್ದ. ಆಂಧ್ರದ ಕದಿರಿ ಮದನಪಲ್ಲಿ, ಬೆಂಗಳೂರಿನ ವೈಟ್ ಪೀಲ್ಡ್, ಯಲಹಂಕ ಮತ್ತು ಚಿಕ್ಕಜಾಲದಲ್ಲಿ ವಿಕೃತ ಕೃತ್ಯಗಳನ್ನು ಎಸಗಿದ್ದ ಎಂಬುದು ಗೊತ್ತಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement