Published
3 hours agoon
By
Akkare News
‘ಝೂಡಿಯೋ’ ಅಂಗಡಿಯ ಮುಂದೆ ದೂರುದಾರರು ಆಟೋದಲ್ಲಿ ಹಣದ ಬ್ಯಾಗ್ ಅನ್ನು ಮರೆತು ತೆರಳಿದ್ದರು. ಬ್ಯಾಗ್ ಗಮನಕ್ಕೆ ಬಂದ ಬಳಿಕ ಆಟೋ ಚಾಲಕನು ಹಣದ ಮಾಲೀಕರನ್ನು ಪತ್ತೆಹಚ್ಚಿ ಬ್ಯಾಗ್ ಹಸ್ತಾಂತರಿಸಲು ಹುಡುಕಾಟ ನಡೆಸುತ್ತಿದ್ದನು.
ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಆಟೋ ಚಾಲಕ ಹಾಗೂ ದೂರುದಾರರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಬಳಿಕ ಆಟೋ ಚಾಲಕನಿಂದಲೇ ₹5 ಲಕ್ಷ ನಗದು ಹಣವಿದ್ದ ಬ್ಯಾಗ್ ಅನ್ನು ದೂರುದಾರರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು.
ಹಣದ ಬ್ಯಾಗ್ ಅನ್ನು ಪ್ರಾಮಾಣಿಕವಾಗಿ ಮರಳಿಸಿದ ಆಟೋ ಚಾಲಕನ ನಡೆಗೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿ, ಠಾಣೆಯಲ್ಲಿ ಸನ್ಮಾನಿಸಿದರು. ಚಾಲಕನ ಪ್ರಾಮಾಣಿಕತೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.



