Connect with us

ಇತರ

ಗಾಂಧೀಕಟ್ಟೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀ ಜಯಂತಿ : ಸ್ವಚ್ಚತೆಯ ಜನ ಜಾಗೃತಿಗಾಗಿ ಸ್ವಚ್ಚತಾ ಜಾಥ

Published

on

ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಗಾಂಧೀ ಕಟ್ಟೆ ಸಮಿತಿ, ತುಳು ಕೂಟ ಹಾಗೂ ತುಳು ಅಪ್ಪೆಕೂಟ ಇದರ ಸಂಯುಕ್ತ ಆಶ್ರಯದಲ್ಲಿ ಗಾಂಧೀ ಜಯಂತಿ ಆಚರಣೆಯು ಅ.2ರಂದು ಬಸ್ ನಿಲ್ದಾಣದ ಬಳಿಯ ಗಾಂಧೀಕಟ್ಟೆಯಲ್ಲಿ ನಡೆಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಪುತ್ತೂರಿನ ಎಂಟು ರೋಟರಿ ಕ್ಲಬ್‌ಗಳ ನೇತೃತ್ವದಲ್ಲಿ ಸ್ವಚ್ಛ ಭಾರತ, ಸುಂದರ ಭಾರತ, ನಮ್ಮ ಕಸ ನಮ್ಮ ಜವಾಬ್ದಾರಿ ಎಂಬ ಉದ್ದೇಶದಲ್ಲಿ ಜನರಲ್ಲಿ ಸ್ವಚ್ಚತೆಯ ಜಾಗೃತಿ ಮೂಡಿಸುವ ಸ್ವಚ್ಚತಾ ಜಾಥಾ ನಡೆಯಿತು. ದರ್ಬೆ ಹಾಗೂ ಬೊಳುವಾರು ವೃತ್ತದ ಬಳಿಯಿಂದ ಏಕಕಾಲದಲ್ಲಿ ಹೊರಟ ಸ್ವಚ್ಚತಾ ಜಾಥಾವು ಗಾಂಧೀಕಟ್ಟೆಯ ಬಳಿ ಸಮಾಪನಗೊಂಡಿತು. ರೋಟರಿ ಕ್ಲಬ್‌ಗಳ ಜೊತೆಗೆ ಸುದಾನ ವಸತಿಯುತ ಶಾಲೆ ಹಾಗೂ ಫಿಲೋಮಿನಾ ಪ್ರೌಢಶಾಲಾ ವಿದ್ಯಾರ್ಥಿಗಳು ಜಾಥಾದಲ್ಲಿ ಸಹಕರಿಸಿದರು. ಗಾಂಧೀಕಟ್ಟೆಯಲ್ಲಿ ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಗಾಂಧೀ ಭಜನೆ ನಡೆಯಿತು. ಸಂಸ್ಮರಣಾ ದೀಪ ಪ್ರಜ್ವಲನೆ ಮಾಡಿದ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಮಾತನಾಡಿ, ಸತ್ಯ ಮತ್ತು ಅಹಿಂಸೆ ಜೀವನದ ಪ್ರಮುಖ ಮೌಲ್ಯಗಳನ್ನಾಗಿಸಿಕೊಂಡಿದ್ದ ಗಾಂಧೀಜಿಯವರು ಸತ್ಯದ ಮಾರ್ಗದಲ್ಲಿ ನಡೆದ ಅನ್ಯಾಯ ಧೈರ್ಯದಿಂದ ಎದುರಿಸಿ ಸರಳ ಸಂದೇಶ ನೀಡುವ ಮೂಲಕ ಇಡೀ ಭಾರತವನ್ನು ಒಂದುಗೂಡಿಸಿದವರು. ಅಸ್ಪೃಶ್ಯತೆ ನಿವಾರಣೆ, ಸಾಮಾಜಿಕ ನ್ಯಾಯ ಮಾತ್ರವಲ್ಲದೆ ಮಹಿಳಾ ಸಬಲೀಕರಣ, ಗ್ರಾಮೀಣಾಭಿವೃದ್ಧಿ ಸ್ವಚ್ಚತೆಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಗಾಂಧೀಜಿಯವರು ಒಬ್ಬ ವ್ಯಕ್ತಿಯಾಗಿ ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿರುವಾಗ ನಾಗರೀಕರಾದ ನಾವೆಲ್ಲ ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪುತ್ತೂರನ್ನು ಸ್ವಚ್ಚ ಶಾಂತಿಯುತ, ಸೌಹಾರ್ಧಯುತ ಪುತ್ತೂರನ್ನಾಗಿ ಬೆಳೆದಸಲು ತಮ್ಮ ಅಮೂಲ್ಯ ಕೊಡುಗೆ ನೀಡಬೇಕು ಎಂದು ಹೇಳಿದರು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾಗಿರುವ ತಹಶೀಲ್ದಾರ್ ಎಸ್.ಬಿ ಕೂಡಲಗಿ ಮಾತನಾಡಿ, ಸತ್ಯ, ಧರ್ಮ ಮತ್ತು ಅಹಿಂಸೆ ಸಾರಿದ ಮಹಾತ್ಮ ಗಾಂಧೀಜಿಯವರು ದೇಶದ ಸ್ವಾತಂತ್ರ್ಯ ಮಾತ್ರವಲ್ಲದೆ ಮತ್ತು ಸಮಾನತಗೆಗಾಗಿ ಹೋರಾಡಿದವರು. ದೇಶದ ಎರಡನೇ ಪ್ರಧಾನಿಯಾಗಿರವ ಲಾಲ್ ಬಹದ್ದೂರ್ ಶಾಸ್ತ್ರಿಯವರು ಜೈ ಜವಾನ್, ಜೈ ಕಿಸಾನ್ ಎಂದು ಬೋಧಿಸಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು. ಅಹಿಂಸೆ, ಶಾಂತಿ ಸಂದೇಶ ಸಾರಿದ ನಾಯಕರ ಹೆಸರು ಸೂರ್ಯಚಂದ್ರ ಇರುವಷ್ಟು ಕಾಲ ಶಾಶ್ವತವಾಗಿ ಉಳಿಯಲಿದೆ ಎಂದರು.

ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರ ಸಭಾ ಪೌರಾಯುಕ್ತೆ ವಿದ್ಯಾ ಎಂ ಕಾಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸುರೇಶ್, ರೋಟರಿ ಕ್ಲಬ್‌ಗಳ ಸಹಾಯಕ ಗವರ್ನರ್ ಎ.ಜೆ ರೈ ಮಾತನಾಡಿದರು. ಸರಕಾರಿ ಸಹಾಯಕ ಅಭಿಯೋಜಕ ಜನಾರ್ದನ, ಅಗ್ನಿಶಾಮಕ ಇಲಾಖೆಯ ಶಂಕರ್, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಸುಬ್ರಹ್ಮಣ್ಯ, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಗಾಂಧೀಕಟ್ಟೆ ಸಮಿತಿಯ ಸಯ್ಯದ್ ಕಮಲ್, ಅಬ್ದುಲ್ ರಹಿಮಾನ್ ಯೂನಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಹಾಗೂ ನಾಗಕರೀಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement