Published
12 hours agoon
By
Akkare News
ಪುತ್ತೂರು: ಟೀಂ ಧನ್ಯೋಸ್ಮಿ ಕಲ್ಲಗುಡ್ಡೆ ತಂಡದ ವತಿಯಿಂದ ನವರಾತ್ರಿ ಪ್ರಯುಕ್ತ ವಿಶೇಷ ವೇಷಭೂಷಣದೊಂದಿಗೆ ಅನಾರೋಗ್ಯ ಪೀಡಿತ ವ್ಯಕ್ತಿಗಳ ಚಿಕಿತ್ಸಾ ನೆರವಿಗಾಗಿ ಹಣ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ.


ಅ.19ರ ಸೋಮವಾರದಂದು ತಂಡವು ಬೊಳುವಾರು ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟು ದರ್ಬೆ, ಮುಕ್ರಂಪಾಡಿ ಮಾರ್ಗವಾಗಿ, ಮೊಟ್ಟೆತ್ತಡ್ಕ ಮಾರ್ಗವಾಗಿ ಪಂಜಳ ಹಾಗೂ ಪುರುಪರ ಕಟ್ಟೆ ತನಕ ಸಂಚರಿಸಿ ನಾಗರಿಕರನ್ನು ಮನರಂಜಿಸುವ ಜೊತೆಗೆ ಅನಾರೋಗ್ಯದಿಂದ ಬಳಲುತ್ತಿರುವ ಮುದ್ದು ಜೀವಗಳಿಗೆ ನೆರವು ಕೋರಲಿದೆ.






