Published
1 year agoon
By
Akkare News
ಕಾರ್ಕಳ ಡಿಸೆಂಬರ್ 14: ಹೃದಯಾಘಾತದಿಂದ ಯುವಜನತೆ ಸಾವನಪ್ಪುತ್ತಿರುವ ಪ್ರಕರಣಗಳ ಸಾಲಿಗೆ ಇದೀಗ ಮತ್ತೊಂದು ಯುವಕ ಸೇರಿದ್ದಾನೆ. ರಾಜ್ಯಮಟ್ಟದ ಕಬಡ್ಡಿ ಆಟಗಾರ ಮುಟ್ಲುಪಾಡಿ ನಡುಮನೆ ನಿವಾಸಿ ಪ್ರೀತಂ ಶೆಟ್ಟಿ(26) ಹೃದಯಾಘಾತದಿಂದ ನಿಧನರಾಗಿದ್ದಾರೆ.ಪ್ರೀತಂ ಅವರು ಶುಕ್ರವಾರ ಮಂಡ್ಯದಲ್ಲಿ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಈ ವೇಳೆ ಆಟವಾಡುತ್ತಿರುವಾಗಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಅಷ್ಟರಲ್ಲೆ ಹೃದಯಘಾತದಿಂದ ಮೃತಪಟ್ಟಿದ್ದಾರೆ.
ಪ್ರತಿಭಾನ್ವಿತ ಪ್ರೀತಂ ಅವರು ಶಿಕ್ಷಣದ ಜತೆಗೆ ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿದ್ದು, ಹಂತಹಂತವಾಗಿ ಶ್ರಮವಹಿಸಿ ಕಬಡ್ಡಿ ಆಟಗಾರನಾಗಿ ಖ್ಯಾತಿ ಪಡೆದಿದ್ದರು. ತಾಯಿ ಮತ್ತು ಓರ್ವ ಸಹೋದರನನ್ನು ಅಗಲಿದ್ದಾರೆ.