Connect with us

ಇತರ

ಗಣೇಶ ಚತುರ್ಥಿ; ಮಂಗಳೂರು-ಬೆಂಗಳೂರು ವಿಶೇಷ ರೈಲುಗಳು

Published

on

ಗಣೇಶ ಚೌತಿ ಉತ್ಸವ ದಟ್ಟನೆ ಪರಿಹರಿಸಲು ಮಂಗಳೂರು-ಬೆಂಗಳೂರು ಮಧ್ಯೆ ಚೌತಿ ವಿಶೇಷ ರೈಲುಗಳನ್ನು ಓಡಿಸಲಾಗುವುದು.

ನಂ.06251 ಯಶವಂತಪುರ ಜಂಕ್ಷನ್-ಮಂಗಳೂರು ಸೆಂಟ್ರಲ್‌ ವಿಶೇಷ ರೈಲು ಯಶವಂತಪುರದಿಂದ ಆ.25ರಂದು ರಾತ್ರಿ11.55 ಕ್ಕೆ ಹೊರಟು ಮರುದಿನ ಮಂಗಳೂರು ಸೆಂಟ್ರಲ್‌ಗೆ ಬೆಳಗ್ಗೆ 11.45 ಕ್ಕೆ ತಲಪಲಿದೆ.
ನಂ.06252 ಮಂಗಳೂರು ಸೆಂಟ್ರಲ್‌ ಯಶವಂತಪುರ ಜಂಕ್ಷನ್‌ ರೈಲು ಆ.26 ರಂದು ಮಧ್ಯಾಹ್ನ 1 ಗಂಟೆಗೆ ಹೊರಟು ಅದೇ ದಿನ ರಾತ್ರಿ 10.40ಕ್ಕೆ ಯಶವಂತಪುರ ಜಂಕ್ಷನ್‌ ತಲಪಲಿದೆ.

‘ನಂ.06253 ಯಶವಂತಪುರ ಜಂಕ್ಷನ್‌ ಮಂಗಳೂರು ಸೆಂಟ್ರಲ್‌ ವಿಶೇಷ ರೈಲು ಆ.26 ರಂದು ರಾತ್ರಿ 11.55 ಕ್ಕೆ ಹೊರಟು ಮರುದಿನ ಬೆಳಗ್ಗೆ 11.45ಕ್ಕೆ ಮಂಗಳೂರು ಸೆಂಟ್ರಲ್‌ ತಲಪಲಿದೆ.
ನಂ.06254 ಮಂಗಳೂರು ಸೆಂಟ್ರಲ್-ಯಶವಂತಪುರ ಜಂಕ್ಷನ್‌ ಎಕ್ಸ್‌ಪ್ರೆಸ್‌ ರೈಲು ಮಂಗಳೂರಿನಿಂದ ಆ.27ರಂದು ಮಧ್ಯಾಹ್ನ 2.15 ಕ್ಕೆ ಹೊರಟು ಅದೇ ರಾತ್ರಿ 11.30 ಕ್ಕೆ ಯಶವಂತಪುರ ತಲಪುವುದು.
ಈ ನಾಲ್ಕೂ ರೈಲುಗಳಿಗೆ ಕುಣಿಗಲ್‌, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯರೋಡ್‌, ಕಬಕಪುತ್ತೂರು, ಬಂಟ್ವಾಳದಲ್ಲಿ ನಿಲುಗಡೆ ಇದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version