Published
3 months agoon
By
Akkare News
ಪುತ್ತೂರು: ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ, ಕೊಲೆಗಳನ್ನು ತನಿಖೆ ಮಾಡಲು ಸರಕಾರ ಎಸ್‌ಐಟಿ ರಚನೆ ಮಾಡಿದ್ದು, ಆದರೆ ಮೀಡಿಯಾಗಳು ಷಡ್ಯಂತ್ರ್ಯ ರೂಪಿಸಿ ಅದನ್ನು ಹಾಳು ಮಾಡಲು ನೋಡುತ್ತಿದ್ದಾರೆ. ಆದರೂ ಇದೆಲ್ಲಕ್ಕೂ ಉತ್ತರ ಮಹಾಲಿಂಗೇಶ್ವರ ದೇವರು ಮತ್ತು ಮಂಜುನಾಥ ಸ್ವಾಮಿ ಕೊಡುತ್ತಾರೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.
ಜಿಲ್ಲೆಯಿಂದ ಗಡಿಪಾರು ಮಾಡುವ ಸುಳ್ಳು ಆರೋಪ ಹೊರಿಸಿ, ಮುಖ್ಯವಾಗಿ ಮೀಡಿಯಾಗಳು ಷಡ್ಯಂತ್ರ್ಯ ಮಾಡಿದ್ದು ಎಂದು ಆರೋಪಿಸಿದ ಅವರು ಪ್ರಥಮವಾಗಿ ರಾಜಕೀಯದವರು, ಮೀಡಿಯಾದವರಿರಬಹುದು.
ಯಾರಾರೂ ಅತ್ಯಾಚಾರಿಗಳ ಜೊತೆ ಇದ್ದಾರೋ ತಿಳಿದು ಮಾಡಿದ ತಪ್ಪಿಗೆ ಈ ಮಹಾಲಿಂಗೇಶ್ವರ ದೇವರೆ ಶಿಕ್ಷೆ ಕೊಡಬೇಕು. ನಾನು 14 ವರ್ಷದಿಂದ ಸೌಜನ್ಯ ಪರ ಹೋರಾಟ ಮಾಡುತ್ತಿದ್ದೇನೆ.