Connect with us

ಇತರ

ಬಳ್ಳಾರಿ ಗಲಭೆಗೆ ಎಸ್ಪಿ ತಲೆದಂಡ: ಅಧಿಕಾರ ಸ್ವೀಕರಿಸಿದ ಒಂದೇ ದಿನಕ್ಕೆ ಪವನ್ ನೆಜ್ಜೂರು ಸಸ್ಪೆಂಡ್!

Published

on

ಹಿಂದೊಮ್ಮೆ ಗಣಿ ದೂಳಿನಿಂದಲೇ ಸುದ್ದಿಯಾಗಿದ್ದ ಬಳ್ಳಾರಿ ರಕ್ತ ರಾಜಕೀಯಕ್ಕೆ ಸಾಕ್ಷಿಯಾಗಿದೆ. ಬರೀ ಟ್ವೆಂಟಿ ಬೈ ಟ್ವೆಂಟಿ ಬ್ಯಾನರ್, ಇಡೀ ಜಿಲ್ಲೆಯಲ್ಲಿ ಸಂಘರ್ಷವನ್ನೇ ಸೃಷ್ಟಿಸಿದೆ. ಕಲ್ಲು ತೂರಾಟ, ಖಾರದು ಪುಡಿ ಎರೆಚಾಟ, ದೊಣ್ಣೆಯಿಂದ ಬಡಿದಾಟ ಇಷ್ಟೆ ಯಾಕೆ ಕಣ್ರಿ.. ಗಾಳಿಯಲ್ಲಿ 12ಕ್ಕೂ ಹೆಚ್ಚು ಸುತ್ತು ಫೈರಿಂಗ್ ಮಾಡಲಾಗಿದ್ದು, ಒಂದು ಬಲೆಟ್ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಎನ್ನುವರ ದೇಹ ಹೊಕ್ಕಿದೆ. ಇನ್ನೊಂದೆಡೆ ಅಧಿಕಾರ ಸ್ವೀಕರಿಸಿದ್ದ ಒಂದೇ ದಿನದಲ್ಲಿ ಬಳ್ಳಾರಿ ಎಸ್ಪಿ ತಲೆದಂಡವಾಗಿದೆ.

ಬಳ್ಳಾರಿ, (ಜನವರಿ 03): ಹೊಸ ವರ್ಷ ದಿನದ ರಾತ್ರಿ ಬಳ್ಳಾರಿಯಲ್ಲಿ ನಡೆದ ಫೈರಿಂಗ್​ನಲ್ಲಿ ಕಾಂಗ್ರೆಸ್​ ಕಾರ್ಯಕರ್ತ ರಾಜಶೇಖರ್ ಬಲಿ ಆಗಿದ್ದಾನೆ. ಕಾಂಗ್ರೆಸ್​ ಶಾಸಕ ಭರತ್ ರೆಡ್ಡಿ ಹಾಗೂ ಗಾಲಿ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಬರೀ ಟ್ವೆಂಟಿ ಬೈ ಟ್ವೆಂಟಿ ಬ್ಯಾನರ್, ಇಡೀ ಜಿಲ್ಲೆಯಲ್ಲಿ ಸಂಘರ್ಷವನ್ನೇ ಸೃಷ್ಟಿಸಿದೆ. ಕಲ್ಲು ತೂರಾಟ, ಖಾರದು ಪುಡಿ ಎರೆಚಾಟ, ಬಡಿದಾಟ ನಡೆದಿದೆ. ಸಾಲದಕ್ಕೆ ಫೈರಿಂಗ್ ಸಹ ಮಾಡಲಾಗಿದೆ. ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದನ್ನು ರಾಜ್ಯ ಸರ್ಕಾರವೂ ಸಹ ಗಂಭೀರವಾಗಿ ಪರಿಗಣಿಸಿದೆ. ಇದರಿಂದ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರು ಅವರನ್ನ ಅಮಾನತು ಮಾಡಲಾಗಿದೆ. ರಾಜಕೀಯ ಕಿತ್ತಾಟದಿಂದ ಬಳ್ಳಾರಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ ಪವನ್ ನೆಜ್ಜೂರು ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ಪರಿಸ್ಥಿತಿ ನಿಭಾಯಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಘಟನೆಯನ್ನ ಸರಿಯಾಗಿ ನಿಭಾಯಿಸಿಲ್ಲ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ ಎಂದು ಡಿಜಿ & ಐಜಿಪಿ ವರದಿ ನೀಡಿದೆ. ಹೀಗಾಗಿ ಪವನ್ ನೆಜ್ಜೂರು ಅವರನ್ನು ಅಮಾನತು ಮಾಡುವಂತೆ ಬಳ್ಳಾರಿ ಡಿಐಜಿ ವರ್ತಿಕಾ ಕಟಿಯಾರ ಅವರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರ ಈ ಕ್ರಮಕೈಗೊಂಡಿದೆ. (ಜ.1) ರಂದು ಬಳ್ಳಾರಿ ಎಸ್‌ಪಿಯಾಗಿ ಪವನ್ ನೆಜ್ಜೂರ್  ಶೋಭಾರಾಣಿ ಅವರಿಂದ ಅಧಿಕಾರ ಸ್ವೀಕರಿಸಿದ್ದರು. ಈಗ ಈಗ ಬ್ಯಾನರ್‌ ಗಲಾಟೆ ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂಬ ಕಾರಣ ನೀಡಿ ಅಮಾನತು ಮಾಡಲಾಗಿದೆ.

ವಾಲ್ಮೀಕಿ ಪುತ್ತಳಿ ಅನಾವರಣ ನಿಮಿತ್ತ ಬಳ್ಳಾರಿಯಲ್ಲಿ ಬ್ಯಾನರ್ ಹಾಕುವ ಸಂಬಂಧ ಶಾಸಕ ಭರತ್ ರೆಡ್ಡಿ ಹಾಗೂ ಗಾಲಿ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಗಲಾಟೆಯಾಗಿದ್ದು, ಪೊಲೀಸರು ಅಶ್ರುವಾಯು ಮೂಲಕ ಗಲಾಟೆಯನ್ನು ಹತೋಟಿಗೆ ತಂದಿದ್ದಾರೆ. ಆದರೂ ದೊಡ್ಡ ಮಟ್ಟದ ಗಲಾಟೆಯಾಗಿದ್ದು, ಒಂದು ಹೆಣ ಬಿದ್ದಿದೆ. ಇದರಿಂದ ಬಳ್ಳಾರಿ ಡಿಐಜಿ ವರ್ತಿಕಾ ಕಟಿಯಾರ ಅವರು ಸರ್ಕಾರಕ್ಕೆ ಅಮಾನತ್ತುಗೊಳಿಸುವಂತೆ ವರದಿ ನೀಡಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರ, ಬಳ್ಳಾರಿ ಎಸ್ಪಿ ಎಸ್ಪಿ ಪವನ್ ನೆಜ್ಜೂರು ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ಪಿ ಆಗಿದ್ದ ಪವನ್ ನೆಜ್ಜೂರು ಅವರನ್ನು ಸರ್ಕಾರ ಬಳ್ಳಾರಿ ಎಸ್ಪಿಯಾಗಿ ವರ್ಗಾವಣೆ ಮಾಡಿತ್ತು. ಅದರಂತೆ ನಿನ್ನೆ ಅಷ್ಟೇ ಪವನ್ ನೆಜ್ಜೂರು ಅವರು ಅಧಿಕಾರ ವಹಿಸಿಕೊಂಡಿದ್ದರು. ಆದ್ರೆ, ದುರದೃಷ್ಟವಶಾತ್ ಅಂದೇ ಈ ಗಲಭೆ ನಡೆದಿದ್ದು, ಒಂದೇ ದಿನದಲ್ಲಿ ಪವನ್ ನೆಜ್ಜೂರು ಸಸ್ಪೆಂಡ್ ಆಗಿದ್ದಾರೆ.

ಸತ್ಯಶೋಧನೆಗೆ ನಿಯೋಗ ರಚನೆ

ಬಳ್ಳಾರಿ ಗಲಭೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಬಗ್ಗೆ ಸಚಿವ ಸಂಪುಟದಲ್ಲೂ ಸಹ ಚರ್ಚೆಯಾಗಿದೆ. ಇದೀಗ ಸರ್ಕಾರ, ಪರಿಸ್ಥಿತಿ ಅವಲೋಕಿಸಲು ನಿಯೋಗ ಕಳುಹಿಸಲು ಮುಂದಾಗಿದ್ದು,ಸಂಬಂಧ ನಿಯೋಗ ನೇಮಕ ತೀರ್ಮಾನಿಸಿದೆ. ಇನ್ನೊಂದೆಡೆ ಪಕ್ಷದ ವತಿಯಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸತ್ಯಶೋಧನಾ ಸಮಿತಿ ರಚನೆ ಮಾಡಿದ್ದಾರೆ. H.M.ರೇವಣ್ಣ, ಜಯಪ್ರಕಾಶ್ ಹೆಗಡೆ, ಟಿ.ರಘುಮೂರ್ತಿ, ಕುಮಾರ್ ನಾಯಕ್, ಜಕ್ಕಪ್ಪನವರ್ ಬಸವನಗೌಡ ಬಾದರ್ಲಿ ಒಳಗೊಂಡ ಸಮಿತಿ ರಚನೆ ಮಾಡಿದ್ದು, ಸ್ಥಳಕ್ಕೆ ತೆರಳಿ ವಾಸ್ತವ ಸ್ಥಿತಿ ವರದಿ ನೀಡುವಂತೆ ಸೂಚಿಸಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version