Connect with us

ಇತರ

ಮೂಡುಬಿದ್ರೆ ಇನ್ಸ್ಪೆಕ್ಟರ್ ಕರ್ಮಕಾಂಡ ಬಯಲು ಆಡಿಯೋ ವೈರಲ್ ತನಿಖೆಗೆ ಎಸ್ಪಿ ಸೂಚನೆ

Published

on

ಮಂಗಳೂರು: ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯ ಮೂಡಬಿದಿರೆ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಸಂದೇಶ್‌ ಪಿಜಿ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಭ್ರಷ್ಟಾಚಾರದ ಗಂಭೀರ ಆರೋಪಗಳು ಇದೆ ಎಂದು ವರದಿಯಾಗಿದೆ.
ಕೌಟುಂಬಿಕ ವ್ಯಾಜ್ಯ ಅಥವಾ ದೂರು ನೀಡಲು ಬಂದ ಮಹಿಳೆಯರನ್ನೇ ಗುರಿ ಮಾಡಿ ಈತ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ. ಸಂತ್ರಸ್ತೆಯೊಬ್ಬಳ ಗಂಡನನ್ನು ಕೇಸ್‌ನಲ್ಲಿ ಸಿಲುಕಿಸಿ, ಆತನನ್ನು ಬಿಡುಗಡೆ ಮಾಡಲು ನನ್ನ ಜೊತೆ ಮಲಗಬೇಕು ಅಥವಾ 25 ಲಕ್ಷ ರೂ ನೀಡಬೇಕು ಎಂದು ಧಮಕಿ ಹಾಕಿರು ವಿಷಯ ಬೆಳಕಿಗೆ ಬಂದಿದೆ.

ಅಂದ ಹಾಗೆ ಈ ಪ್ರಕರಣದಲ್ಲಿ ಇನ್ನೊಂದು ಕರಾವಳ ಅಂಶವೇನೆಂದರೆ ಈ ಇನ್ಸ್‌ಪೆಕ್ಟರ್‌ ತಾನು ಲೈಂಗಿಕವಾಗಿ ಬಳಸಿಕೊಂಡ ಮಹಿಳೆಯೊಬ್ಬರ ಅಪ್ರಾಪ್ತ ಮಗಳ ಮೇಲೂ ಕೆಟ್ಟದೃಷ್ಟಿ ಹಾಕಿದ್ದ ಎನ್ನಲಾಗಿದೆ. ಆಕೆ ಓದುತ್ತಿರುವ ಕಾಲೇಜಿಗೆ ಹೋಗುತ್ತೇನೆ ಎಂದು ಫೋನ್‌ನಲ್ಲಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾನೆ. ಈ ಆರೋಪಕ್ಕೆ ಸಂಬಂಧಪಟ್ಟ ಆಡಿಯೋ ವೈರಲ್‌ ಆಗಿದೆ ಎನ್ನಲಾಗಿದ್ದು, ಇದು ಸಾರ್ವಜನಿಕರ ಆಕ್ರೊಶಕ್ಕೆ ಕಾರಣವಾಗಿದೆ.

ಈತನ ವಿರುದ್ಧ ಹಿರಿಯ ಅಧಿಕಾರಿಗಳಿಗೆ ಕಳೆದ ಹಲವು ತಿಂಗಳಿನಿಂದ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎನ್ನುವ ಆರೋಪವಿತ್ತು. ಪ್ರಕರಣದ ತೀವ್ರತೆ ಅರಿತ ಮಂಗಳೂರು ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ತನಿಖೆಗೆ ಆದೇಶ ನೀಡಿದ್ದಾರೆ. ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್‌ ಅವರಿಗೆ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ.

 ಇಲ್ಲಿಯವರೆಗೆ ಯಾವೊಬ್ಬ ಮಹಿಳೆ ಕೂಡಾ ಅಧಿಕೃತವಾಗಿ ಲೈಂಗಿಕ ಕಿರುಕುಳದ ದೂರನ್ನು ನೀಡಿಲ್ಲ. ಯಾರಾದರೂ ಸಂತ್ರಸ್ತೆಯರಿದ್ದರೆ ಧೈರ್ಯವಾಗಿ ಬಂದು ದೂರು ನೀಡಿ ಎಂದು ಕಮಿಷನರ್‌ ಮನವಿ ಮಾಡಿದ್ದಾರೆ. ಈಗಾಗಲೇ ಸಿಎಂ, ಗೃಹ ಸಚಿವರು ಮತ್ತು ಮಹಿಳಾ ಆರೋಗಕ್ಕೂ ದೂರು ನೀಡಿದ್ದೇನೆ ಎಂದು ಸಂತ್ರಸ್ತ ಮಹಿಳೆ ಹೇಳಿದ್ದು, ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿರುವುದಾಗಿ ವರದಿಯಾಗಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version