Published
3 weeks agoon
By
Akkare News
2026 ರ ಜನಗಣತಿ ಪ್ರಕ್ರಿಯೆಯಲ್ಲಿ ನಾಗರಿಕರು ಸಕ್ರಿಯವಾಗಿ ಭಾಗವಹಿಸುವಂತೆ, ನಿಖರ ಮತ್ತು ಸಮಗ್ರ ದತ್ತಾಂಶ ಸಂಗ್ರಹಣೆಯನ್ನು ಖಚಿತಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಮಾಹಿತಿ ನೀಡಿದ್ದಾರೆ.
ಸ್ವಯಂ-ಗಣತಿ ಅಭಿಯಾನವನ್ನು ಏಪ್ರಿಲ್ 1 ರಿಂದ ಏಪ್ರಿಲ್ 15, 2026 ರವರೆಗೆ ಅಧಿಕೃತ ಆನ್‌ಲೈನ್ ಪೋರ್ಟಲ್ ಮೂಲಕ ನಡೆಸಲಾಗುವುದು, ಇದರಿಂದಾಗಿ ನಾಗರಿಕರು ತಮ್ಮ ಮನೆಯ ವಿವರಗಳನ್ನು ಅನುಕೂಲಕರವಾಗಿ ಸಲ್ಲಿಸಲು ಸಾಧ್ಯವಾಗುತ್ತದೆ.
ಈ ಉಪಕ್ರಮವು ಪಾರದರ್ಶಕ ಆಡಳಿತ ಮತ್ತು ಭವಿಷ್ಯದ ಅಭಿವೃದ್ಧಿಗಾಗಿ ಪರಿಣಾಮಕಾರಿ ಯೋಜನೆಯತ್ತ ಒಂದು ನಿರ್ಣಾಯಕ ಹೆಜ್ಜೆಯಾಗಿದೆ.
ಸ್ವಯಂ ಗಣತಿ ಎಂದರೇನು?
ವೆಬ್‌ಸೈಟ್: (ಗಮನಿಸಿ: ಈ ಲಿಂಕ್ ಏಪ್ರಿಲ್ 1 ರಿಂದ ಸಕ್ರಿಯವಾಗಲಿದೆ).
ಮೊಬೈಲ್ ಮೂಲಕ ಜನಗಣತಿ ಮಾಡುವುದು ಹೇಗೆ? (ಹಂತ-ಹಂತದ ಮಾಹಿತಿ
ನೀವು ಮನೆಯಲ್ಲೇ ಕುಳಿತು ಸುಲಭವಾಗಿ ಈ ಕೆಳಗಿನ 4 ಹಂತಗಳಲ್ಲಿ ಗಣತಿ ಪ್ರಕ್ರಿಯೆ ಪೂರ್ಣಗೊಳಿಸಬಹುದು:
ಹಂತ 1: ಮೊದಲು ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ.
ಹಂತ 2: ನಿಮ್ಮ ಸಕ್ರಿಯ ಮೊಬೈಲ್ ಸಂಖ್ಯೆಯನ್ನು ಬಳಸಿ ಲಾಗಿನ್ (OTP ಮೂಲಕ) ಆಗಿ.
ಹಂತ 3: ತೆರೆದುಕೊಳ್ಳುವ ಪೇಜ್‌ನಲ್ಲಿ ನಿಮ್ಮ ಕುಟುಂಬದ ಸದಸ್ಯರ ಹೆಸರು, ವಯಸ್ಸು, ಲಿಂಗ, ವಿಳಾಸ ಮತ್ತು ವಾಸಸ್ಥಳದ ನಿಖರ ವಿವರಗಳನ್ನು ಭರ್ತಿ ಮಾಡಿ.
ಮುಂದಿನ ಕ್ರಮ: ಏಪ್ರಿಲ್ 16ರಿಂದ ಗಣತಿದಾರರು ನಿಮ್ಮ ಮನೆಗೆ ಬಂದಾಗ, ನೀವು ಪಡೆದ ಈ ‘ರೆಫರೆನ್ಸ್ ಐಡಿ’ ತೋರಿಸಿದರೆ ಸಾಕು. ಅವರು ನಿಮ್ಮ ಮಾಹಿತಿಯನ್ನು ಮರುಪರಿಶೀಲಿಸಿ ಪ್ರಕ್ರಿಯೆ ಮುಕ್ತಾಯಗೊಳಿಸುತ್ತಾರೆ.
ಹಂತ 4: ಮಾಹಿತಿ ಸಬ್ಮಿಟ್ ಮಾಡಿದ Just ನಿಮ್ಮ ಮೊಬೈಲ್‌ಗೆ ಒಂದು ‘ರೆಫರೆನ್ಸ್ ಐಡಿ’ (Reference ID) ಬರುತ್ತದೆ. ಇದನ್ನು ಸುರಕ್ಷಿತವಾಗಿಟ್ಟುಕೊಳ್ಳಿ.
ಡಿಜಿಟಲ್ ಗಣತಿಯ ಪ್ರಯೋಜನಗಳು
ಸಮಯದ ಉಳಿತಾಯ: ಗಣತಿದಾರರು ಬಂದಾಗ ಗಂಟೆಗಟ್ಟಲೆ ಕುಳಿತು ಮಾಹಿತಿ ನೀಡುವ ಅವಶ್ಯಕತೆ ಇರುವುದಿಲ್ಲ.
ನಿಖರತೆ: ಡಿಜಿಟಲ್ ಮ್ಯಾಪ್ ಮತ್ತು
ಪಿನ್ ಕೋಡ್‌ಗಳ ಬಳಕೆಯಿಂದಾಗಿ ನಿಮ್ಮ ವಾಸಸ್ಥಳದ ಮಾಹಿತಿ ಅತ್ಯಂತ ನಿಖರವಾಗಿ ದಾಖಲಾಗುತ್ತದೆ.
ಪಾರದರ್ಶಕತೆ: ನಿಮ್ಮ ಮಾಹಿತಿಯನ್ನು ನೀವೇ ದಾಖಲಿಸುವುದರಿಂದ ತಪ್ಪುಗಳಾಗುವ ಸಾಧ್ಯತೆ