Connect with us

ಇತರ

ಅಕಸ್ಮಿಕವಾಗಿ ಸಿಡಿದ ಪಟಾಕಿ: ಗಾಯಗೊಂಡಿದ್ದ ಬಾಲಕನಿಗೆ ಒಂದು ಲಕ್ಷ ರೂ ಸಿ ಎಂ ಪರಿಹಾರ: ಶಾಸಕ ಅಶೋಕ್ ರೈ

Published

on

ಪುತ್ತೂರು: ರಸ್ತೆ ಬದಿಯಲ್ಲಿ ಬಿದ್ದು ಸಿಕ್ಕಿದ ಪಟಾಕಿಯೊಂದನ್ನು ಮನೆಗೆ ತಂದ ಬಾಲಕನೋರ್ವ ಅದನ್ನು ಹುಡಿ ಮಾಡಿ ಬೆಂಕಿ ಕೊಟ್ಟಿದ್ದು ಇದರಿಂದ ಪಟಾಕಿ ಸ್ಪೋಟಗೊಂಡು ಗಾಯಗೊಂಡಿದ್ದ ಬಾಲಕನಿಗೆ ಸಿ ಎಂ ಪರಿಹಾರ ನಿಧಿಯಿಂದ ಒಂದು ಲಕ್ಷ ಪರಿಹಾರ ಒದಗಿಸಲಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಮಾಣಿಲ ಗ್ರಾಮದ ಗುತ್ತಿನ ಬೈಲು ನಿವಾಸಿ ಗೌತಮ್ ಪೂಜಾರಿ ಎಂಬ ಬಾಲಕ ಶಾಲೆ ಬಿಟ್ಟು ಮನೆಗೆ ವಾಪಸ್ಸಾಗುವ ವೇಳೆ ದಾರಿಯಲ್ಲಿದ್ದ ಪಟಾಕಿಯನ್ನು ಮನೆಗೆ ತಂದಿದ್ದ. ಅದು ಪಟಾಕಿ ಎಂದು ಗೊತ್ತಿಲ್ಲದೆ ಅದನ್ನು ಹುಡಿ ಮಾಡಿ ಬೆಂಕಿ ಕೊಟ್ಟಿದ್ದ.ಇದರಿಂದ ಪಟಾಕಿ ಸ್ಪೋಟಗೊಂಡು ಬಾಲಕನ ಕೈ ಯ ಬೆರಳುಗಳು ನಷ್ಟವಾಗಿದ್ದವು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕನಿಗೆ ಶಾಸಕ ಅಶೋಕ್ ರೈ ಶಿಫಾರಸ್ಸಿನಂತೆ ಪರಿಹಾರ ಧನ ಮಂಜೂರಾಗಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement