Published
2 years agoon
By
Akkare News
ಬೆಂಗಳೂರು : ಹೊಸ ವರ್ಷ ಬರಮಾಡಿಕೊಳ್ಳುವ ಸಂಭ್ರಮಾಚರಣೆಯಲ್ಲಿ ಮದ್ಯದ ಕಿಕ್ ಕೂಡ ಜೋರಾಗಿತ್ತು. ನ್ಯೂ ಇಯರ್ ಗೆ ಸರ್ಕಾರದ ಬೊಕ್ಕಸಕ್ಕೆ ಎಣ್ಣೆ ಕಾಸು ಹರಿದು ಬಂದಿದೆ.2023ರ ಕೊನೆಯ ದಿನವಾದ ಭಾನುವಾರದಂದು 193 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಈ ಮೂಲಕ ಒಂದೇ ದಿನ ಭರ್ಜರಿ ಲಿಕ್ಕರ್ ಮಾರಾಟ ఆగిದೆ.
ಒಟ್ಟಿನಲ್ಲಿ ಎರಡು ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ಹರಿದುಬಂದಿದೆ. ನಗರ ಹಾಗೂ ಗ್ರಾಮೀಣ ಭಾಗದ ಮೂಲೆ ಮೂಲೆಯಲ್ಲಿಯೂ ಜನರು ಮದ್ಯದ ನಶೆಯ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.ಮದ್ಯಪ್ರಿಯರು ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಭರ್ಜರಿ ಕಿಕ್ ಕೊಟ್ಟಿದ್ದಾರೆ. 2023ರ ಕೊನೇ ದಿನ ಡಿ.31ರಂದು ರಾಜ್ಯಾದ್ಯಂತ ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 193 ಕೋಟಿ ರೂಪಾಯಿ ಹರಿದು ಬಂದಿದೆ. ಮಾಮೂಲಿ ದಿನದಲ್ಲಿ ಒಂದು ದಿನಕ್ಕೆ ರಾಜ್ಯದ ಅಬಕಾರಿ ಇಲಾಖೆಗೆ ಸುಮಾರು 90 ಕೋಟಿ ಆದಾಯ ಬರುತ್ತಾ ಇತ್ತು. ಆದರೆ ನ್ಯೂ ಇಯರ್ ಸೆಲೆಬ್ರೇಷನ್ ಹಿನ್ನೆಲೆಯಲ್ಲಿ ಒಂದೇ ದಿನದಲ್ಲಿ ಅಬಕಾರಿ ಇಲಾಖೆ ಆದಾಯ ದುಪ್ಪಟ್ಟು ಏರಿಕೆಯಾಗಿದೆ.
ಕಳೆದ ಡಿಸೆಂಬರ್ 23ರಿಂದ ಡಿಸೆಂಬರ್ 31ರವರೆಗೆ 1072 ಕೋಟಿ ರೂಪಾಯಿ ಆದಾಯ ರಾಜ್ಯ ಸರ್ಕಾರಕ್ಕೆ ಬಂದಿದೆ. ಡಿಸೆಂಬರ್ 23ರಿಂದ ಡಿಸೆಂಬರ್ 31ರವರೆಗೂ IML ಲಿಕ್ಕರ್ನಲ್ಲಿ ಒಟ್ಟು 22.2 ಲಕ್ಷದ ಬಾಕ್ಸ್ ಮಾರಾಟವಾಗಿದೆ. 22.2 ಲಕ್ಷ ಬಾಕ್ಸ್ ಸೆಲ್ ಆಗಿರುವುದರಿಂದ ಒಟ್ಟು 900 ಕೋಟಿ ರೂಪಾಯಿ ಆದಾಯ ಬಂದಿದೆ. ನ್ಯೂ ಇಯರ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಯರ್ 14.07 ಲಕ್ಷ ಬಾಕ್ಸ್ ಸೇಲ್ ಮಾಡಲಾಗಿದೆ. ಬಿಯರ್ ಮಾರಾಟದಿಂದಲೇ ಸುಮಾರು 170 ಕೋಟಿರೂಪಾಯಿ ಆದಾಯ ಸರ್ಕಾರದ ಬೊಕ್ಕಸಕ್ಕೆ ಬಂದಿದೆ. ಇನ್ನು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಬರೋಬ್ಬರಿ 2900 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಅಬಕಾರಿ ಇಲಾಖೆಗೆ ಬಂದಿದೆ. ಅಂದ್ರೆ ಡಿಸೆಂಬರ್ ತಿಂಗಳಲ್ಲಿ ಬರೋಬ್ಬರಿ ಮೂರು ಸಾವಿರ ಕೋಟಿ ರೂಪಾಯಿ ಆದಾಯ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದ್ರೆ ಬಿಯರ್ ಮಾರಾಟದಲ್ಲಿ 15 ಪರ್ಸೆಂಟ್ ಏರಿಕೆ ಕಂಡಿದೆ.