Published
5 months agoon
By
Akkare Newsಉಪ್ಪಿನಂಗಡಿ : ಐತಿಹಾಸಿಕ ಹಿನ್ನಲೆಯ ಉಪ್ಪಿನಂಗಡಿ ಸಂಗಮಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಭಾರಿ ಮಳೆಯ ಪರಿಣಾಮ ನೇತ್ರಾವತಿ ನೀರು ಏರಿಕೆ ಆಗಿ ಸಹಸ್ರಲಿಂಗೇಶ್ವರ ದೇವಸ್ಥಾನದ ಎದುರಿಗೆ ಬಂದಿದೆ. ಕುಮಾರಧಾರ ನದಿಯ ನೀರು ಇನ್ನು ಸ್ವಲ್ಪ ಏರಿದರೆ ಗಯಪದ ಕ್ಷೇತ್ರ ಉಪ್ಪಿನಂಗಡಿಯಲ್ಲಿ ಸಂಗಮ ನಡೆಯುತ್ತದೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ದೇವಸ್ಥಾನ ಎದುರು ಬಾಗಿನ ಅರ್ಪಿಸಿದರು. ಉಪ್ಪಿನಂಗಡಿಯಲ್ಲಿ ನೇತ್ರಾವತಿ ಕುಮಾರಧಾರ ನದಿಗಳ ನೀರು ಸಹಸ್ರಲಿಂಗೇಶ್ವರ ದೇವಸ್ಥಾನದ ಅಂಗಣಕ್ಕೆ ಬಂದು ಧ್ವಜಸ್ತಂಭಕ್ಕೆ ಸುತ್ತು ಹೊಡೆದಾಗ ಸಂಗಮ ಆಗುವುದೆಂದು ಭಕ್ತರ ನಂಬಿಕೆ.
ಸಂಗಮ ನಡೆದಾಗ ದೇವರಿಗೆ ವಿಶೇಷ ಪೂಜೆ ಹಾಗೂ ಬಾಗಿನ ಅರ್ಪಿಸುವ ಪದ್ದತಿ ಈ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಇದೀಗ ಸಾವಿರಾರು ಭಕ್ತರು ಸಂಗಮದ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.