ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕ್ರೀಡೆ

ಪುತ್ತೂರಿನ ಹೆಸರನ್ನು ರಾಷ್ಟ್ರ ಮಟ್ಟಕ್ಕೆ ತಂದ ಕು|ಸಿಯಾ : ಈಜು ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ: ಡಬ್ಬಲ್ ಚಿನ್ನದ ಪದಕ

Published

on

ಪುತ್ತೂರು: ಬೆಂಗಳೂರಿನ ರಾಮಮೂರ್ತಿ ನಗರದಲ್ಲಿರುವ ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಇದೇ ಆಗಸ್ಟ್ 17ನೇ ಶನಿವಾರದಂದು ನಡೆದ ವಿದ್ಯಾ ಭಾರತಿ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ 9ನೇ ತರಗತಿ ವಿದ್ಯಾರ್ಥಿನಿಯಾದ ಕು|ಸಿಯಾ ಭಾವಿನ್ ಸವ್ಜಾನಿ ಇವರು, 200 ಮೀಟರ್ ಫ್ರೀ ಸ್ಟೈಲ್ ಮತ್ತು 100 ಮೀಟರ್ ಫ್ರೀ ಸ್ಟೈಲ್ ನಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

 

ಅಂತೆಯೇ, 100ಮೀಟರ್ ಬ್ಯಾಕ್ ಸ್ಟ್ರೋಕ್, 4×100 ರಿಲೇ, 4×100 ರಿಲೇ ಫ್ರೀ ಸ್ಟೈಲ್ ನಲ್ಲಿ ಬೆಳ್ಳಿಪದಕವನ್ನು ತನ್ನದಾಗಿಸಿಕೊಳ್ಳುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇವರು, ಪುತ್ತೂರಿನ ಬಾಲವನದ ಈಜು ತರಬೇತಿದಾರರಾದ; ಪಾರ್ಥ ವಾರಣಾಸಿ, ನಿರೂಪ್ ಕೋಟ್ಯಾನ್ ಮತ್ತು ದೀಕ್ಷಿತ್ ಇವರಿಂದ ಸುಮಾರು 10ವರ್ಷಗಳಿಂದ ತರಬೇತಿ ಪಡೆಯುತ್ತಿದ್ದಾರೆ.

 

ಇವರು ಪ್ರಸ್ತುತ ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ವಾಸವಾಗಿರುವ ಹಾಗೂ ಕೋಡಿಂಬಾಡಿಯ ‘ಕೃಷ್ಣಕೃಪಾ’ ಅಡಿಕೆ ಖರೀದಿ ಮತ್ತು ಸಂಸ್ಕರಣಾ ಉದ್ಯಮದ ಮಾಲೀಕರಾದ ಭಾವಿನ್ ಅಶೋಕ್ ಭಾಯಿ ಸವ್ಜಾನಿ ಮತ್ತು ಸಹನಾ ಭವಿನ್ ಸವ್ಜಾನಿ ದಂಪತಿ ಸುಪುತ್ರಿ.

 

 

 


 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version