Published
2 months agoon
By
Akkare Newsಬಂಟ್ವಾಳ : ಬಂಟ್ವಾಳ ತಾಲೂಕಿನ ಶ್ರೀ ದುರ್ಗಾ ಸೇವಾ ಸಮಿತಿ ರಾಯಪ್ಪಕೋಡಿ ಕಲ್ಲಡ್ಕ ವತಿಯಿಂದ 2 ನೇ ವರ್ಷದ ನಿಧಿ ಸಂಗ್ರಹ ಪ್ರಯುಕ್ತ ನವರಾತ್ರಿ ಸಂಧರ್ಭ ದಲ್ಲಿ ವೇಷ ಹಾಕಿ ನಿಧಿಸಂಗ್ರಹ ಮಾಡಿ ಬುಡ್ ಚಿಯಾರಿ ಸಿಂಡ್ರೋಮ್ ಖಾಹಿಲೆ ಇಂದ ಬಳಲುತಿರುವ ಪುತ್ತೂರಿನ ರಂಜನ್ ಎನ್ನುವವರ 3 ವರ್ಷದ ಮಗು ಅಗಸ್ತ್ಯ ಕೃಷ್ಣ ನಿಗೆ ರೂಪಾಯಿ 37000/- ನೀಡಲಾಯಿತು.
ಈ ಪುಣ್ಯ ಕಾರ್ಯದಲ್ಲಿ ಸಮಿತಿಯ ಸದಸ್ಯರಾದ ದೀಕ್ಷಿತ್ ಆಚಾರ್ಯ, ಮೋಹಿತ್ ಆಚಾರ್ಯ, ರಕ್ಷಿತ್ ಆಚಾರ್ಯ, ಶ್ರೀಧರ್ ಆಚಾರ್ಯ, ಹರಿಪ್ರಸಾದ್, ಮಿಥುನ್, ಯಶ್ವಿನ್ ಕಲ್ಲಡ್ಕ, ಪ್ರವೀಣ್ ರಾಯಪ್ಪಕೋಡಿ, ಜಗದೀಶ್ ರಾಯಪ್ಪಕೋಡಿ, ಸೋಹನ್ ಕಲ್ಲಡ್ಕ ಭಾಗವಹಿಸಿದ್ದರು.
ಕಳೆದ ವರ್ಷ್ ಕೂಡ ಪ್ರಥಮ ಕಾರ್ಯ ವಾಗಿ 23000/-ನಿಧಿ ಸಂಗ್ರಹ ಮಾಡಿ ಕಾವ್ಯ ವೆಂಬ 11 ವರ್ಷ ದ ಬಾಲಕಿಗೆ ನೀಡಲಾಗಿತು.
ಈ ಸಮಾಜಸೇವಾ ಕಾರ್ಯಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.