ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಕ್ರೀಡೆ ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಧಾರ್ಮಿಕ ಪ್ರಕಟಣೆ ಪ್ರತಿಭಾ ಪುರಸ್ಕಾರ ಮಂಗಳೂರು ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಉಬಾರ್ ಕಂಬಳೋತ್ಸವಕ್ಕೆ ಇಂದು ಚಾಲನೆ; ಬೋಟಿಂಗ್, ಸಸ್ಯ ಮೇಳ, ಆಹಾರ ಮೇಳ, ಸಾಂಸ್ಕೃತಿಕ ವೈಭವ ಈ ಬಾರಿಯ ವಿಶೇಷPublished
3 days agoon
By
Akkare Newsಮುಂಬೈ: 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನಲ್ಲಿ ಹರಿಯಾಣ ಸ್ಟೀಲರ್ಸ್ ತಂಡವು ನೂತನ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಪಾಟ್ನಾ ಪೈರೇಟ್ಸ್ ವಿರುದ್ಧದ ರೋಚಕ ಫೈನಲ್ನಲ್ಲಿ ಗೆದ್ದ ಹರಿಯಾಣ ಪಿಕೆಎಲ್ ಇತಿಹಾಸದಲ್ಲೇ ಚೊಚ್ಚಲ ಟ್ರೋಫಿ ಎತ್ತಿಹಿಡಿದಿದೆ. ಡಿಸೆಂಬರ್ 29ರ ಭಾನುವಾರ ರಾತ್ರಿ ಪುಣೆಯ ಶ್ರೀ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ಈ ಹಣಾಹಣಿಯಲ್ಲಿ 32-23 ಅಂಕಗಳಿಂದ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಳೆದ ಬಾರಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಸ್ಟೀಲರ್ಸ್, ಪ್ರಶಸ್ತಿ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಪಾಟ್ನಾ ಪೈರೇಟ್ಸ್ 4ನೇ ಟ್ರೋಫಿ ಕನಸು ಭಗ್ನಗೊಂಡಿದೆ.
ಪಂದ್ಯದಲ್ಲಿ ಟಾಸ್ ಜಯಿಸಿದ ಪಾಟ್ನಾ, ಎದುರಾಳಿ ತಂಡಕ್ಕೆ ರೈಡ್ಗೆ ಅವಕಾಶ ನೀಡಿತು. ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಹರಿಯಾಣ ಯಾವುದೇ ಹಂತದಲ್ಲೂ ಪಾಟ್ನಾಗೆ ಲೀಡ್ ಬಿಟ್ಟುಕೊಡಲಿಲ್ಲ. ಪಾಟ್ನಾ ಪರ ಆಯಾನ್ ಎರಡು ಅಂಕ ಪಡೆದು 7-7 ಸಮಬಲ ಸಾಧಿಸಲು ನೆರವಾದರೂ ಮೊದಲಾರ್ಧ ಮುಕ್ತಾಯಕ್ಕೆ 15-12 ಅಂಕಗಳಿಂದ ಹಿನ್ನಡೆ ಅನುಭವಿಸಿತು. ಈ ವೇಳೆ ಹರಿಯಾಣ 7 ರೈಡ್ ಪಾಯಿಂಟ್ಸ್, ಪಾಟ್ನಾ 5 ರೈಡ್ ಪಾಯಿಂಟ್ಸ್ ಪಡೆಯಿತು. ಅಲ್ಲದೆ, ಹರಿಯಾಣ 8 ಟ್ಯಾಕಲ್, ಪಾಟ್ನಾ 6 ಟ್ಯಾಕಲ್ ಅಂಕ ಪಡೆಯಿತು. ಫಸ್ಟ್ ಹಾಫ್ ಬಳಿಕವೂ ಹರಿಯಾಣ ಆರ್ಭಟ ಮುಂದುವರೆಯಿತು. ಪಾಟ್ನಾ ಪ್ರಬಲ ಪೈಪೋಟಿ ನೀಡಲು ಯತ್ನಿಸಿದರೂ ಗೆಲುವಿನ ದಡ ಸೇರಲು ಸಾಧ್ಯವಾಗಿಲ್ಲ.
ದ್ವಿತೀಯಾರ್ಧದಲ್ಲಿ ಇನ್ನೂ 12 ನಿಮಿಷಗಳು ಇರುವಾಗ ಭರ್ಜರಿ ಮುನ್ನಡೆ ಸಾಧಿಸಿದ ಹರಿಯಾಣ, ಮತ್ತೆ ಹಿಂದಿರುಗಿ ನೋಡಲಿಲ್ಲ. ಪಂದ್ಯದ 28 ನಿಮಿಷಗಳಲ್ಲಿ ಸ್ಕೋರ್ ಪಾಟ್ನಾ 18 ಮತ್ತು ಸ್ಟೀಲರ್ಸ್ 27 ಅಂಕ ಪಡೆದಿತ್ತು. ಹರಿಯಾಣ ಅಂತಿಮ ಕ್ಷಣದವರೆಗೂ ಮುನ್ನಡೆ ಕಾಯ್ದುಕೊಂಡು 32-23 ಅಂಕಗಳಿಂದ ಗೆದ್ದು ಬೀಗಿತು. ಹರಿಯಾಣ ಪರ ಶಿವಂ ಪರಾತೆ 9 ಅಂಕ, ಮೊಹಮ್ಮದ್ರೇಜಾ ಶಾಡ್ಲೌಯಿ ಚಿಯಾನೆ 7 ಅಂಕ, ವಿನಯ್ 6 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಪಾಟ್ನಾ ಪರ ಗುರುದೀಪ್ 6, ದೇವಾಂಕ್ 5 ಅಂಕ ಪಡೆದು ಹೋರಾಟ ನಡೆಸಿದರಾದರೂ ತಂಡಕ್ಕೆ ಗೆಲುವು ತಂದುಕೊಡಲು ವಿಫಲರಾದರು.