Published
3 hours agoon
By
Akkare Newsಹಾಡುಹಗಲೇ ಮನೆಯೊಳಗೆ ನುಗ್ಗಿ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನಕ್ಕೆ ಬಳಸಿದ ಕಾರು ಸಮೇತ ಪ್ರಮುಖ ಆರೋಪಿ ಯನ್ನು ಪೊಲೀಸರು ಬಂಧಿಸಿ, ಚಿನ್ನಾಭರಣ ಸಮೇತ ರೂ. 21 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಯನ್ನು ಅಂತರಾಜ್ಯ ಮನೆ ಕಳ್ಳತನದ ಪ್ರಮುಖ ಆರೋಪಿ ಕೇರಳ ಮೂಲದ ಸೂರಜ್ ಕೆ ಎಂದು ಗುರುತಿಸಲಾಗಿದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ವೆ ಭಕ್ತಕೋಡಿ ಎಂಬಲ್ಲಿ ಡಿಸೆಂಬರ್ 20 ರಂದು ಹಾಡುಹಗಲೇ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಹಿಂಬಾಗಿಲನ್ನು ಕಾಲಿನಿಂದ ಒದ್ದು ಬಾಗಿಲು ಮುರಿದು ಮನೆಯ ಒಳಗಿದ್ದ ಗೋಡ್ರೆಜನ್ನು ಮೀಟಿ ಚಿನ್ನಾಭರಣವನ್ನು ಕಳವು ಗೈದ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಲವು ಕಡೆ ಕಳ್ಳತನ ಆಗುತ್ತಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರ ಸೂಚನೆಯಂತೆ ಜಂಟಿ ಕಾರ್ಯಾಚರಣೆ ನಡೆಸಿ ಹಗಲು ಮನೆ ಕಳ್ಳತನ ನಡೆಸಿ ಯಾವುದೇ ಸುಳಿವು ನೀಡದೇ ಪರಾರಿಯಾಗುತ್ತಿದ್ದ ಆರೋಪಿ ಕೇರಳ ಮೂಲದ ಸೂರಜ್ ಕೆ (36 ವರ್ಷ) ಎಂಬಾತನನ್ನು ಕಳ್ಳತನಕ್ಕೆ ಬಳಸುತ್ತಿದ್ದ ಕಾರು ಸಮೇತ ಬಂಧಿಸುವಲ್ಲಿ ಅಪರಾಧ ಪತ್ತೆ ತಂಡದವರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿಯನ್ನು ವಿಚಾರಿಸಲಾಗಿ ಈತನು ಪುತ್ತೂರು ಗ್ರಾಮಾಂತರ ಠಾಣಾ ಸರಹದ್ದಿನ ಸರ್ವೆ ಗ್ರಾಮದ ಭಕ್ತಕೋಡಿ ಹಾಗೂ ಈ ಹಿಂದೆ ಕಡಬ ಠಾಣಾ ಸರಹದ್ದಿನ ಆಲಂಗಾರು ಗ್ರಾಮದ ಕಲೆರಿ ಬಂಟ್ವಾಳ ಗ್ರಾಮಾಂತರ ಸರಹದ್ದಿನ ಇರಾ ಹಾಗೂ ವಿಟ್ಲ ಪೊಲೀಸ್ ಠಾಣಾ ಸರಹದ್ದಿನ ಕೊಲ್ನಾಡು ಗ್ರಾಮದ ಕುಂಟು ಕುಡೇಲು, ಮಂಕುಡೆ, ಕಾಡುಮಠ ಇದ್ದಿದು ಗ್ರಾಮದ ಆಳಕೆ ಮಜಲು ಕಡೆಗಳಲ್ಲಿ ಹಗಲು ಸಮಯ ಕಳವು ಮಾಡಿದ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿರುತ್ತದೆ. ಈತನ ಮೇಲೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ 5,5 147/2024 50 305,331 (3) 2 2 2 2023, ಕಡಬ ಪೊಲೀಸ್ ಠಾಣೆಯಲ್ಲಿ ಅ,ಕ್ರ 110/2024 0 305,331(3) ಬಿ ಎನ್ ಎಸ್ 2023, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ 6.5 74/2024500 305,331(3) 2 2 2 ಬಿ ಎನ್ ಎಸ್ 2023, ವಿಟ್ಲ ಪೊಲೀಸ್ ಠಾಣೆಯಲ್ಲಿ ಅ,ಕ್ರ 146/2024 305,331(3) 2 2 2 ಬಿ ಎನ್ ಎಸ್ 2023, ಮತ್ತು ಅ,ಕ್ರ 154/2024 52 305,331(3) 2 2 2 ಬಿ ಎನ್ ಎಸ್ 2023, ಅ,ಕ್ರ 156/2024 0 305,331(3) 22 23 ಬಿ ಎನ್ ಎಸ್ 2023, ಅ,ಕ್ರ 173/2024 500 305, 331(3) 2 2 2 ಬಿ ಎನ್ ಎಸ್ 2023 ಪ್ರಕರಣಗಳು ದಾಖಲಾಗಿದೆ.
ಇದೊಂದು ವಿಶೇಷ ಪ್ರಕರಣ ಆಗಿದ್ದು ಆರೋಪಿಯು ಕಳ್ಳತನ ಮಾಡಿ ಯಾವುದೇ ಸುಳಿವು ಸಿಗದೆ ಪರಾರಿಯಾಗುತ್ತಿದ್ದು ಈ ಬಗ್ಗೆ ವಿಶೇಷ ತಂಡ ರಚಿಸಿ ಅಂತರಾಜ್ಯ ಕಳ್ಳನನ್ನು ಪತ್ತೆಹಚ್ಚುವಲ್ಲಿ ವಿಟ್ಲ, ಕಡಬ ಹಾಗೂ ಪುತ್ತೂರು ಗ್ರಾಮಾಂತರ ಅಪರಾಧ ಪತ್ತೆ ತಂಡದ ಕಾರ್ಯಾಚರಣೆ ಯಶಸ್ವಿಯಾಗಿದೆ.
ಆರೋಪಿ ಪತ್ತೆ ಬಗ್ಗೆ, ಕಾರ್ಯಾಚರಣೆಯನ್ನು ದ.ಕ ಜಿಲ್ಲೆ ಅಧೀಕ್ಷಕರಾದ ಮಾನ್ಯ ಶ್ರೀ ಯತೀಶ್, ಎನ್ ಐ.ಪಿ.ಎಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಜೇಂದ್ರ ಡಿ.ಎಸ್ ರವರ ಮಾರ್ಗದರ್ಶನದಂತೆ ಪುತ್ತೂರು ಪೊಲೀಸ್ ಉಪಾಧಿಕ್ಷಕರಾದ ಶ್ರೀ ಆರುಕ್ ನಾಗೇಗೌಡ ಹಾಗೂ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ಶ್ರೀ ವಿಜಯ್ ಪ್ರಸಾದ್ ರವರ ನಿರ್ದೇಶನದಂತೆ ಪುತ್ತೂರು ಗ್ರಾಮಾಂತರ ನಿರೀಕ್ಷಕರಾದ ಶ್ರೀ ರವಿ ಬಿ.ಎಸ್.ವಿಟ್ಲ ಪೊಲೀಸ್ ನಿರೀಕ್ಷಕರಾದ ನಾಗರಾಜ್ ಹೆಚ್ ಇ.ರವರ ನೇತೃತ್ವದಲ್ಲಿ, ಪೊಲೀಸ್ ಉಪ ನಿರೀಕ್ಷಕರಾದ ಜಂಬೂರಾಜ್ ಬಿ ಮಹಾಜನ್ ಮಪಿಎಸ್ ಐ ಸುಷ್ಮಾ ಜಿ ಭಂಡಾರಿ, ಎಎಸ್‌ಐ ಮುರುಗೇಶ್ ಸಿಬ್ಬಂದಿಗಳಾದ ಉದಯ ರಾಧಾಕೃಷ್ಣ, ಪುವೀಣ್ ರೈ ಪಾಲಾದಿ, ಸುರಿಯ, ಅದ್ರಾಮ್, ಹರೀಶ್ ಗೌಡ, ಹರಿಶ್ಚಂದ್ರ ಹರ್ಷಿತ್‌ಗೌಡ, ಚಂದ್ರಶೇಖರ್ ಗೆರ್ಜ್, ಶರಣಪ್ಪ, ಪಾಟೀಲ್ ಶಂಕರ ಸಂತಿ, ಗದಿಗಪ್ಪ, ವಿವೇಕ್ ಕುಮಾರ್ ಹೆಜ್, ನಾಗೇಶ್ ಕೆ ಸಿ ಗಣಕಯಂತ್ರ ವಿಭಾಗದ ದಿವಾಕರ್ ಸಂಪತ್ ಚಾಲಕರಾದ ಎಆರ್ ಎಸ್ ಐ ಯೋಗೇಶ್ ಹಾಗೂ ನಿತೇಶ್ ಕರ್ನೂರು ವಿಶೇಷ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ. ಪತ್ರ ತಂಡಕ್ಕೆ ಪೊಲೀಸ್ ಅಧೀಕ್ಷಕರು ವಿಶೇಷ ಬಹುಮಾನ ಘೋಷಿಸಿರುತ್ತಾರೆ.