Published
9 months agoon
By
Akkare News
ಬೆಂಗಳೂರು : ಸ್ಕೂಲ್ ಬಸ್ ಡ್ರೈವರ್ಗಳನ್ನೇ ನಂಬಿಕೊಂಡು ಪೋಷಕರು ಮಕ್ಕಳನ್ನ ಕಳಿಸುತ್ತಾರೆ.. ಆದ್ರೆ, ಹಲವು ಚಾಲಕರು ಎಣ್ಣೆ ಹೊಡೆದು ಸ್ಟೇರಿಂಗ್ ಹಿಡಿತಿರೋದು ಬಯಲಾಗಿದೆ.. ಹೌದು ಕಂಠಪೂರ್ತಿ ಕುಡಿದು ವಾಹನ ಚಲಾಯಿಸುತ್ತಿರುವುದು ತಿಳಿದುಬಂದಿದ್ದು,
ಇದೇ ಅವಸ್ಥೆಯಲ್ಲಿಯೇ ಹಲವು ಕಡೆ ವಾಹನ ಚಾಲನೆ ಮಾಡಿಕೊಂಡು ಬಂದಿರುವುದಾಗಿ ಪತ್ತೆಯಾಗಿದೆ. ಸದ್ಯ ಪೊಲೀಸರು ವಾಹನ ಸಮೇತ ಚಾಲಕನನ್ನು ವಶಕ್ಕೆ ಪಡೆದಿದ್ದು, ಸಂಬಂಧಪಟ್ಟ ಖಾಸಗಿ ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ.ಒಟ್ಟು 4,559 ಶಾಲಾ ವಾಹನಗಳ ಪರಿಶೀಲನೆ ಮಾಡಲಾಗಿದ್ದು, 59 ಚಾಲಕರು ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿರುವುದು ಬೆಳಕಿಗೆ ಬಂದಿದೆ.
ಶಾಲೆಗಳು ಶುರುವಾದ ಹಿನ್ನೆಲೆ ಸಂಚಾರಿ ಪೊಲೀಸರು ಶಾಲಾ ವಾಹನಗಳ ಮೇಲೆ ಕಣ್ಣಿಟ್ಟಿದ್ದು, ಡ್ರೈವರ್‌ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಬೆಳ್ಳಂಬೆಳಿಗ್ಗೆ ಸಂಚಾರಿ ಪೊಲೀಸರು ಶಾಲಾ ವಾಹನ ಚಾಲಕನೊಬ್ಬನ ಡಿಡಿ ಚೆಕ್ ಮಾಡಿದ್ದು, ರೀಡಿಂಗ್ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ.