Published
8 months agoon
By
Akkare News
ಮಂಗಳೂರು : ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕಾರ್ಮಿಕ ಸಂಘಟನೆಯಾದ ಇಂಟೆಕ್ (Indian national trade union congress) ಇದರ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಶ್ರೀಮತಿ ಪ್ರಭಾವತಿ.ಆರ್.ಶೆಟ್ಟಿ ಇವರನ್ನು ಮಾನ್ಯ ಶಾಸಕ UT ಖಾದರ್ ರವರ ಶಿಫಾರಸು ಮೇರೆಗೆ ಇಂಟೆಕ್ ರಾಜ್ಯಾಧ್ಯಕ್ಷ ಶ್ರೀ ರಾಕೇಶ್ ಮಲ್ಲಿಯವರು ನೇಮಕ ಮಾಡಿದ್ದಾರೆ
ರಾಷ್ಟೀಯ ಮಟ್ಟದಲ್ಲಿ ಹೆಸರು ಮಾಡಿರುವ ಖ್ಯಾತ ಕ್ರೀಡಾಪಟು, ಸಮಾಜ ಸೇವಕಿಯೂ ಆಗಿರುವ ಪ್ರಭಾವತಿ ಯವರು ದುಡಿಯುವ ವರ್ಗದ ಕಾರ್ಮಿಕರ ಹಕ್ಕುಗಳ ರಕ್ಷಣೆ ಬಗ್ಗೆ ಕಾಳಜಿ ಇಟ್ಟು ಕೊಂಡಿರುವ ಇವರು ಈ ನಿಟ್ಟಿನಲ್ಲಿ ಮಾಡಿರುವ ಹೋರಾಟದ ಮೂಲಕ ಜನರ ಗಮನ ಸೆಳೆದ ಸಾಮಾಜಿಕ ಹೋರಾಟಗಾರ್ತಿ.
ರಾಜ್ಯ ಇಂಟೆಕ್ ಸಂಘಟನೆಯನ್ನು ತನ್ನ ಸಾಮರ್ಥ್ಯ,ಧೈರ್ಯ, ಸಂಘಟನಾ ಚಾತುರ್ಯ ದಿಂದ ಬಲಿಷ್ಠ ಗೊಳಿಸಿದ ಹೆಗ್ಗಳಿಕೆ ಹೊಂದಿರುವ ಸಂಘಟನೆಯ ರಾಜ್ಯಾಧ್ಯಕ್ಷ ಶ್ರೀ ರಾಕೇಶ್ ಮಲ್ಲಿ ಯವರು ಶ್ರೀಮತಿ ಪ್ರಭಾವತಿ ಶೆಟ್ಟಿ ಯವರಿಗೆ ನೂತನ ಹುದ್ದೆಯ ನೇಮಕಾತಿ ಪತ್ರವನ್ನು ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಇಂಟಕ್ ಸಂಘಟನೆಗೆ ಕಾನೂನು ಸಲಹೆಗಾರ ಹಾಗೂ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ದಿನಕರ್ ಶೆಟ್ಟಿ,ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಯುವ ಉದ್ಯಮಿ,ಯುವ ನಾಯಕ,ಸಮಾಜ ಸೇವಕ ನವನೀತ್ ಉಳ್ಳಾಲ್ ಹಾಗೂ ರಾಮಕೃಷ್ಣ ಶೆಟ್ಟಿ ಇವರುಗಳು ಶ್ರೀ ರಾಕೇಶ್ ಮಲ್ಲಿ ಜೊತೆಗಿದ್ದರು.