Connect with us

ಇತರ

ಮಂಗಳೂರು : ದೇವಸ್ಥಾನಗಳಲ್ಲಿ ಸೇವಾ ರೂಪ ಏರಿಕೆ ಯಾವುದೋ ದೇವಸ್ಥಾನದ ಹಣ ಸರಕಾರದ ಖಜಾನೆಗೆ ಸೇರಲ್ಲ : ಸಚಿವ ರಾಮಲಿಂಗ ರೆಡ್ಡಿ

Published

on

ಮಂಗಳೂರು, ಸೆ.25: ಕಟೀಲು ಶ್ರೀ ದುರ್ಗಾಪರಮೇಶ್ವರಿ ಸೇರಿದಂತೆ ರಾಜ್ಯದ ಯಾವುದೇ ದೇವಸ್ಥಾನದ ದುಡ್ಡು ಸರಕಾರದ ಖಜಾನೆ ಜಮೆಯಾಗುವುದಿಲ್ಲ. ಈ ಎಲ್ಲ ವಿಚಾರಗಳು ಗೊತ್ತಿದ್ದರೂ ಬಿಜೆಪಿ
ರಾಜಕೀಯ ಲಾಭಕ್ಕಾಗಿ ದೇವಸ್ಥಾನಗಳ ಹಣ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಲಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.


ಮಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಟೀಲ್ ಕ್ಷೇತ್ರದಲ್ಲಿ ಸೇವಾ ಶುಲ್ಕ ಏರಿಕೆ ಮಾಡಿರುವ ವಿಚಾರದಲ್ಲಿ ಸರಕಾರದ ಪಾತ್ರ ಇಲ್ಲ. ಅವರು ಸೇವಾ ಶುಲ್ಕ ಏರಿಕೆಗೆ
ಸ್ವತಂತ್ರರು. ಇಂತಹ 398 ಸ್ವಾಯತ್ತ ಸಂಸ್ಥೆಗಳು ರಾಜ್ಯದಲ್ಲಿ ಇದೆ. ಕಟೀಲ್ ದೇವಸ್ಥಾನದಲ್ಲಿ ಸೇವಾ ಶುಲ್ಕ ಏರಿಕೆಯ ಬಗ್ಗೆ ಬಿಜೆಪಿ ಸರಕಾರ ವಿರುದ್ಧ ಅಪ್ರಚಾರ ಮಾಡುತ್ತಿದೆ. ಸೇವಾ ಶುಲ್ಕ ವಿಚಾರದಲ್ಲಿ ಸರಕಾರದ ಪಾತ್ರ ಇಲ್ಲ ಎಂದು ಕಟೀಲ್ ದೇವಸ್ಥಾನದ ಆಡಳಿತ ಸಮಿತಿ ಸ್ಪಷ್ಟನೆ ನೀಡಿದೆ ಎಂದರು.

ಹಸ್ತಕ್ಷೇಪ ಮಾಡುವಂತಿಲ್ಲ : ಕಟೀಲು ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದರೂ, ಅಲ್ಲಿಗೆ ಸರಕಾರ ಕಾರ್ಯ ನಿರ್ವಹಣಾಧಿಕಾರಿಯ ನೇಮಕ ಕೂಡಾ ಮಾಡುವಂತಿಲ್ಲ. ಆಡಳಿತ ಸಂಪೂರ್ಣ ದೇವಸ್ಥಾನದ ಮ
ಮಂಡಳಿಗೆ ಸೇರಿರು ತ್ತದೆ. ಸರಕಾರ ಯಾವುದೇ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ನ್ಯಾಯಾಲಯದ ಆದೇಶವೇ ಇದೆ ಎಂದು ಸಚಿವರು ಸ್ಪಷ್ಟಪಡಿಸಿದರು.
2003ರಲ್ಲಿ ಧಾರ್ಮಿಕ ಪರಿಷತ್ ಕಾನೂನು ಜಾರಿಗೆ ಬಂದ ಬಳಿಕ ಒಂದು ದೇವಸ್ಥಾನದ ಹಣ ಇನ್ನೊಂದು ದೇವಸ್ಥಾನದ ಅಭಿವೃದ್ಧಿಗೆ ಬಳಸುವಂತಿಲ್ಲ. ಸರಕಾರದ ಖಜಾನೆಗೂ ಹಣ ಬರುವುದಿಲ್ಲ ಎಂದು ಹೇಳಿದರು.

2019ರಿಂದ 2023ರ ವರೆಗಿನ ಬಿಜೆಪಿ ಸರಕಾರದ ಅವಯಲ್ಲಿ 24 ದೇವಸ್ಥಾನಗಳ ಸೇವಾ ಶುಲ್ಕ ಪರಿಷ್ಕರಿಸಿದೆ. ನಮ್ಮ ಸರಕಾರ ಬಂದ ಮೇಲೆ ಕುಕ್ಕೆ ಸುಬ್ರಮಣ್ಯ ಸೇರಿದಂತೆ 14 ದೇವಸ್ಥಾನಗಳ ಆಡಳಿತ ಮಂಡಳಿಯು ಕಾರಣ ಗಳನ್ನು ನೀಡಿ, ದರ ಪರಿಷ್ಕರಣೆ ಮಾಡಿಕೊಡಿ ಎಂದು ಮನವಿ ಮಾಡಿದ್ದು, ಇಲಾಖೆ ಆಯುಕ್ತರು ಒಪ್ಪಿಗೆ ಸೂಚಿಸಿದೆ ಎಂದರು.

 

ಧಾರ್ಮಿಕ ಪರಿಷತ್ ನಿಯಂತ್ರಣದಲ್ಲಿ: 1997ರಲ್ಲಿ ಜೆ.ಎಚ್.ಪಟೇಲ್ ಸಿಎಂ ಆಗಿದ್ದಾಗ ರಾಜ್ಯ ಧಾರ್ಮಿಕ ಪರಿಷತ್ ಎಂಬ ಹೊಸ ಮಸೂದೆ ಮಂಡಿಸಿದ್ದು, 2003ರಲ್ಲಿ ಅಂದಿನ ಸಿಎಂ ಎಸ್.ಎಂ.ಕೃಷ್ಣ ಕಾನೂನು ಮಾಡಿದ್ದರು. ಅದರಂತೆ ರಾಜ್ಯ, ಜಿಲ್ಲಾಮಟ್ಟದಲ್ಲಿ ಧಾರ್ಮಿಕ ಪರಿಷತ್ ಸದಸ್ಯರ ನೇಮಕ ಮಾಡಲಾಗುತ್ತಿದೆ. ರಾಜ್ಯದಲ್ಲಿ ಎ ಮತ್ತು ಬಿ ಗ್ರೇಡ್‌ನ ಒಟ್ಟು 398 ದೇವಸ್ಥಾನಗಳಿದ್ದು, ಎಲ್ಲದಕ್ಕೂ ಅಧ್ಯಕ್ಷ ಮತ್ತು ಎಂಟು ಮಂದಿ ಸದಸ್ಯರು, ಮುಖ್ಯ ಅರ್ಚಕರು ಇರುತ್ತಾರೆ ಎಂದು ಮಾಹಿತಿ ನೀಡಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version