Connect with us

ಇತರ

ಹೊಸದಾಗಿ ವಿವಾಹ ಆಗುವವರಿಗೆ ಭರ್ಜರಿ ಗುಡ್ ನ್ಯೂಸ್: 50,000 ರೂಪಾಯಿ ಆರ್ಥಿಕ‌ ನೆರವು

Published

on

ಒಂದು ಮದುವೆ ಮಾಡಬೇಕೆಂದ್ರೆ ಸುಲಭದ ಮಾತಲ್ಲ. ಒಂದಲ್ಲ.. ಎರಡಲ್ಲ ಸುಮಾರು ಖರ್ಚುಗಳು ಬರುತ್ತವೆ. ಈ ನಡುವೆಯೇ ಇದೀಗ ಹೊಸದಾಗಿ ವಿವಾಹ ಆಗುವವರಿಗೆ ಭರ್ಜರಿ ಗುಡ್‌ ನ್ಯೂಸ್‌ವೊಂದು ಇದ್ದು, 50,000 ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಹೌದು.. ಒಂದ ಮನೆ ಕಟ್ಟಿ ನೋಡು.. ಮದುವೆ ಮಾಡಿ ನೋಡು ಎನ್ನುವ ಮಾತಿದೆ. ಇದರಂತೆಯೇ ಈಗಿನ ಕಾಲದಲ್ಲಿ ಒಂದು ಮದುವೆ ಮಾಡಬೇಕಂದ್ರೆ ಸಲಭದ ಮಾತಲ್ಲ. ತುಂಬಾ ಖರ್ಚುಗಳು ಬರುತ್ತವೆ. ಇದೀಗ ಹೊಸದಾಗಿ ವಿವಾಹ ಆಗುವವರಿಗೆ ಗುಡ್‌ ನ್ಯೂಸ್‌ ಇದ್ದು, ಆರ್ಥಿಕ ಪರಿಹಾರ ಘೋಷಣೆ ಮಾಡಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಮೂಹ ವಿವಾಹ ವೆಚ್ಚಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹೊಸದಾಗಿ ವಿವಾಹ ಆಗುವವರು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಉತ್ತೇಜನ ನೀಡುವುದರ ಜೊತೆಗೆ ಆರ್ಥಿಕ ಹೊರೆಯನ್ನು ತಗ್ಗಿಸಬೇಕೆಂಬ ಉದ್ದೇಶದಿಂದ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸರಳ ವಿವಾಹಕ್ಕೆ ಪ್ರತಿ ಜೋಡಿಗೆ 50,000 ಸಾವಿರ ರೂಪಾಯಿ ನೀಡಲಾಗುವುದು. ಇದರಿಂದ ಹೊಸದಾಗಿ ವಿವಾಹ ಆಗುವವರಿಗೆ ಆರ್ಥಿಕ ಹೊರೆ ತಗ್ಗಿದಂತಾಗಲಿದೆ.

ಯಾರೆಲ್ಲ ಅರ್ಜಿ ಸಲ್ಲಿಕೆ ಮಾಡಬಹುದು? * ವಧು-ವರರು ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಒಂದಕ್ಕೆ (ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್ ಅಥವಾ ಪಾರ್ಸಿ) ಸೇರಿದವರು ಆಗಿರಬೇಕು * ಸಾಮೂಹಿಕ ವಿವಾಹದಲ್ಲಿ ಕನಿಷ್ಠ 10 ಜೋಡಿಗಳು ಭಾಗವಹಿಸಬೇಕು * ವಧುವಿನ ವಯಸ್ಸು 18 ರಿಂದ 42 ವರ್ಷ ವಯಸ್ಸಿನವರಾಗಿರಬೇಕು ಮತ್ತು ವರನ ವಯಸ್ಸು 21ರಿಂದ 45 ವರ್ಷ ವಯಸ್ಸಿನವರಾಗಿರಬೇಕು. * ಈ ಯೋಜನೆಯಡಿಯಲ್ಲಿ ಸಹಾಯ ಪಡೆಯಲು, ಪ್ರತಿ ವಧು-ವರರ ವಾರ್ಷಿಕ ಆದಾಯ 2.50 ಲಕ್ಷ ರೂಪಾಯಿಗೂ ಹೆಚ್ಚಿರಬಾರದು ಮತ್ತು ಅವರ ಒಟ್ಟು ಆದಾಯ ₹25.00 ಲಕ್ಷ ಮೀರಬಾರದು. * ಈ ಪ್ರಯೋಜನವನ್ನು ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಪಡೆಯಬಹುದು. * ವರನಿಗೆ ಈಗಾಗಲೇ ಜೀವಂತ ಪತ್ನಿ ಇದ್ದಲ್ಲಿ ಅಥವಾ ವಧುವಿಗೆ ಈಗಾಗಲೇ ಜೀವಂತ ಪತಿ ಇದ್ದಲ್ಲಿ ಅಂತಹವರಿಗೆ ಈ ಯೋಜನೆ ಅನ್ವಯ ಆಗುವುದಿಲ್ಲ. * ಒಂದು ಕುಟುಂಬದಿಂದ ಒಬ್ಬ ವ್ಯಕ್ತಿ ಮಾತ್ರ ಈ ಯೋಜನೆಯ ಅಡಿಯಲ್ಲಿ ಪ್ರಯೋಜನವನ್ನು ಪಡೆಯಬಹುದು.

ಈ ಪಕಟಣೆಯಲ್ಲಿ ಜಿಲ್ಲಾವಾರು ಗುರಿ ನಿಗದಿ | ಈಗಲೇ ಅರ್ಜಿ ಸಲ್ಲಿಸಿ! ಸರಳ, ಅರ್ಥಪೂರ್ಣ ವಿವಾಹಗಳನ್ನು ಘನತೆ ಮತ್ತು ಬೆಂಬಲದೊಂದಿಗೆ ಉತ್ತೇಜಿಸೋಣ! ಈ ಅವಕಾಶವನ್ನು ಕಳೆದುಕೊಳ್ಳಬೇಡಿ – ಇಂದೇ ಅರ್ಜಿ ಸಲ್ಲಿಸಿ ಎಂದು ತಿಳಿಸಲಾಗಿದೆ. ಇನ್ನೂ ಈ ಸಾಮೂಹಿಕ ವಿವಾಹಗಳನ್ನು ಮಾಡಿಸುವ ಜವಾಬ್ದಾರಿ ಹೊತ್ತಿರುವವರು ಧನಸಹಾಯಕ್ಕಾಗಿ ಪ್ರತಿ ದಂಪತಿಯಿಂದ 5 ಸಾವಿಯ ರೂಪಾಯಿಗಳನ್ನು ಪಡೆಯಲಾಗುತ್ತದೆ ಅಂತಲೂ ತಿಳಿಸಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version