Connect with us

ಇತರ

ಕೋಡಿಂಬಾಡಿಯ ಇತಿಹಾಸ ದಲ್ಲಿಯೇ ಕ್ರಾಂತಿ: 100 ಮತ್ತು 92 ಸರ್ವೇ ನಂಬರಿನ ಫ್ಲೋಟಿಂಗ್ ಪ್ರಾರಂಭ!ಇಚ್ಛಾಶಕ್ತಿ ಇದ್ದರೆ ಯಾವುದೇ ಕೆಲಸ ಮಾಡಬಹುದು ಎಂಬುದಕ್ಕೆ ಸಾಕ್ಷಿ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್

Published

on

ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇತಿಹಾಸದಲ್ಲಿಯೇ ಕ್ರಾಂತಿ ಉಂಟು ಮಾಡುವ ಕಾರ್ಯ ನಡೆಯುತ್ತಿದೆ. ಕೋಡಿಂಬಾಡಿಯ 100 ಮತ್ತು 92 ಸರ್ವೆ ನಂಬರಿನ ಪ್ಲಾಟಿಂಗ್ ಇತಿಹಾಸದಲ್ಲಿಯೇ ಆಗಿರಲಿಲ್ಲ. ಇದೀಗ ಶಾಸಕ ಅಶೋಕ್ ಕುಮಾರ್ ರೈ ಅವರ ಸೂಚನೆ ಮತ್ತು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ರವರ ಸತ ಪ್ರಯತ್ನದಿಂದ ಈಗಾಗಲೇ ಸರ್ವೇ ಪ್ರಾರಂಭವಾಗಿದೆ.

100 ಸರ್ವೆ ನಂಬರಿನಲ್ಲಿ ಸುಮಾರು 146.76 ಎಕ್ರೆ ಜಾಗವಿದ್ದು 79 ಕುಟುಂಬಗಳು ಇದೆ. 92 ಸರ್ವೆ ನಂಬರಿನಲ್ಲಿ 228.33 ಎಕ್ರೆ ಜಾಗವಿದ್ದು 69 ಕುಟುಂಬಗಳಿವೆ. ಫ್ಲೋಟಿಂಗ್ ಗೆ ಸಹಕರಿಸಿದ ನಿವೃತ್ತ ತಹಶೀಲ್ದಾರ್ ಪುರಂದರ ಹೆಗ್ಡೆ, ನಿವೃತ್ತ ಉಪತಹಸಿಲ್ದಾರ್ ಚೆನ್ನಪ್ಪ ಗೌಡ, ಉಪ್ಪಿನಂಗಡಿ ಹೋಬಳಿ ಕಂದಾಯ ನಿರೀಕ್ಷಕ ಚಂದ್ರ ನಾಯಕ್, ಭೂ ಇಲಾಖೆಯ ಸಹಾಯಕ ನಿರ್ದೇಶಕ ಯಚ್.ವಿ.ಶ್ರೀನಿವಾಸ ಮೂರ್ತಿ, ಸರ್ವೇ ಇಲಾಖೆಯ ಮೇಲ್ವಿಚಾರಕ ಪ್ರಮೋದ್ ಕೆ. ಆರ್, ಕೋಡಿಂಬಾಡಿ ಗ್ರಾಮ ಆಡಳಿತ ಅಧಿಕಾರಿ ಶರಣ್ಯ, ಗ್ರಾಮ ಸಹಾಯಕ ವೀರಪ್ಪ ಗೌಡ, ಸರ್ವೇಯರ್ ಮಂಜುನಾಥ್, ಭೂ ದಾಖಲೆಗಳ ನಿರ್ದೇಶಕರ ಕಚೇರಿಯ ಸಿಬ್ಬಂದಿ ಸುಭಾಕರ್, ಅಭಿಲೇಖನ ಕಚೇರಿ ಅಧಿಕಾರಿ ದೀಪಕ್, ಕಂದಾಯ ಇಲಾಖೆಯ ಸೌಮ್ಯ ಮತ್ತು ಮೋಹನ್ ರವರ ಇಚ್ಛಾ ಶಕ್ತಿ ಮತ್ತು ಸಹಕಾರದೊಂದಿಗೆ ಇದೀಗ ಭರ್ಜರಿಯಾಗಿ ಪ್ಲಾಟಿಂಗ್ ನಡೆಯುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿ ಬೇಕಾದಲ್ಲಿ ಸರ್ವೆಯರ್ ಮಂಜುನಾಥ್ ಅವರನ್ನು ಸಂಪರ್ಕಿಸಬಹುದು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version