Published
2 months agoon
By
Akkare News
ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರ್ವತ್ರಿಕ ರಜೆ ಪಟ್ಟಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಮುಂದಿನ ವರ್ಷ ಎಲ್ಲಾ ಸರ್ಕಾರಿ ಕಚೇರಿಗಳಿಗೆ, ಶಾಲೆಗಳಿಗೆ, ಸಂಸ್ಥೆಗಳಿಗೆ ಈ ರಜೆಗಳು ಅನ್ವಯವಾಗಲಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ರಜೆ ಇರಲಿದೆ.
| ದಿನಾಂಕ | ದಿನ | ರಜೆಗೆ ಕಾರಣ |
| ಜನವರಿ 15 | ಗುರುವಾರ | ಸಂಕ್ರಾಂತಿ ಹಬ್ಬ |
| ಜನವರಿ 26 | ಸೋಮವಾರ | ಗಣರಾಜ್ಯೋತ್ಸವ |
| ಮಾರ್ಚ್ 19 | ಗುರುವಾರ | ಯುಗಾದಿ ಹಬ್ಬ |
| ಮಾರ್ಚ್ 21 | ಶನಿವಾರ | ರಂಜಾನ್ |
| ಮಾರ್ಚ್ 31 | ಮಂಗಳವಾರ | ಮಹಾವೀರ ಜಯಂತಿ |
| ಏಪ್ರಿಲ್ 3 | ಶುಕ್ರವಾರ | ಗುಡ್ ಫ್ರೈಡೇ |
| ಏಪ್ರಿಲ್ 14 | ಮಂಗಳವಾರ | ಅಂಬೇಡ್ಕರ್ ಜಯಂತಿ |
| ಏಪ್ರಿಲ್ 20 | ಸೋಮವಾರ | ಬಸವಜಯಂತಿ/ ಅಕ್ಷಯ ತೃತೀಯ |
| ಮೇ 1 | ಶುಕ್ರವಾರ | ಕಾರ್ಮಿಕರ ಜಯಂತಿ |
| ಮೇ 28 | ಗುರುವಾರ | ಬಕ್ರೀದ್ |
| ಜೂನ್ 26 | ಶುಕ್ರವಾರ | ಮೋಹರಾಂ ಕಡೇ ದಿನ |
| ಆಗಸ್ಟ್ 15 | ಶನಿವಾರ | ಸ್ವಾತಂತ್ರ್ಯ ದಿನಾಚರಣೆ |
| ಆಗಸ್ಟ್ 26 | ಬುಧವಾರ | ಈದ್ ಮಿಲಾದ್ |
| ಸೆಪ್ಟೆಂಬರ್ 14 | ಸೋಮವಾರ | ಗಣೇಶ ಚತುರ್ಥಿ |
| ಅಕ್ಟೋಬರ್ 2 | ಶುಕ್ರವಾರ | ಗಾಂಧಿ ಜಯಂತಿ |
| ಅಕ್ಟೋಬರ್ 20 | ಮಂಗಳವಾರ | ಮಹಾನವಮಿ/ ಆಯುಧ ಪೂಜೆ |
| ಅಕ್ಟೋಬರ್ 21 | ಬುಧವಾರ | ವಿಜಯದಶಮಿ |
| ನವೆಂಬರ್ 10 | ಮಂಗಳವಾರ | ಬಲಿಪಾಡ್ಯಮಿ ದೀಪಾವಳಿ |
| ನವೆಂಬರ್ 27 | ಶುಕ್ರವಾರ | ಕನಕದಾಸ ಜಯಂತಿ |
| ಡಿಸೆಂಬರ್ 25 | ಬುಧವಾರ | ಕ್ರಿಸ್‌ಮಸ್ |
ಭಾನುವಾರಗಳಂದು ಬರುವ ಮಹಾ ಶಿವರಾತ್ರಿ (ಫೆಬ್ರವರಿ 15), ಮಹರ್ಷಿ ವಾಲ್ಮೀಕಿ ಜಯಂತಿ (ಅಕ್ಟೋಬರ್ 25), ಕನ್ನಡ ರಾಜ್ಯೋತ್ಸವ (ನವೆಂಬರ್ 1) ಹಾಗೂ ನರಕ ಚತುರ್ದಶಿ (ನವೆಂಬರ್ 8) ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆ (ಅಕ್ಟೋಬರ್ 10) ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.
03.09.2026 (ಗುರುವಾರ) ಕೈಲ್ ಮೂಹೂರ್ತ, ದಿನಾಂಕ:18.10.2026 (ಭಾನುವಾರ) ತುಲಾ ಸಂಕ್ರಮಣ ಹಾಗೂ ದಿನಾಂಕ:26.11.2026 (ಗುರುವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.