Published
2 months agoon
By
Akkare News
ಮಂಗಳೂರು::ಮ್ಯಾಪಿಂಗ್ 2002ರ ಮತದಾರರ ಪಟ್ಟಿಯನ್ನು 2025ರ ಮತದಾರರ ಪಟ್ಟಿಗೆ ಜೋಡಣೆ ಮಾಡುವುದು. 2002ರ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ನೋಂದಣಿಯಾಗದಿದ್ದಲ್ಲಿ ಅವರ ತಂದೆ / ತಾಯಿ / ಅಜ್ಜ / ಅಜ್ಜಿಯವರ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯೊಂದಿಗೆ ಜೋಡಣೆ ಮಾಡಿಕೊಳ್ಳಬೇಕು. 2002ರ ಮತದಾರರಾಗಿದ್ದಲ್ಲಿ ನೀವು 2002ರಲ್ಲಿ ವಾಸವಿದ್ದಂತಹ ವಿಧಾನಸಭಾ ಕ್ಷೇತ್ರ ಹೆಸರು / ಸಂಖ್ಯೆ, ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯನ್ನು ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗೆ ನೀಡಿ ಸಹಕರಿಸಬೇಕು ಎಂದಿದ್ದಾರೆ.
ಒಂದು ವೇಳೆ ನೀವು 2002ರಲ್ಲಿ ಮತದಾರರಾಗಿ ಇಲ್ಲದಿದ್ದಲ್ಲಿ, ನಿಮ್ಮ ತಂದೆ / ತಾಯಿ / ಅಜ್ಜ /ಅಜ್ಜಿಯವರು ವಾಸವಿದ್ದಂತಹ ವಿಧಾನ ಸಭಾ ಕ್ಷೇತ್ರದ ಹೆಸರು / ಸಂಖ್ಯೆ, ಭಾಗ ಸಂಖ್ಯೆ, ಹಾಗೂ ಕ್ರಮ ಸಂಖ್ಯೆಯನ್ನು ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗೆ ಮಾಹಿತಿ ನೀಡಬೇಕು. 2002ರ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಮೂಲಕ ಹುಡುಕಬಹುದು. ಸಾರ್ವಜನಿಕರು ಮ್ಯಾಪಿಂಗ್ ಕಾರ್ಯವನ್ನು ಪೂರ್ಣಗೊಳಿಸಲು ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.