Connect with us

ಇತರ

ಸದನದ ಶಿಸ್ತು, ಘನತೆ, ಗೌರವದ ಬಗ್ಗೆ ಮಾತನಾಡಲು ಬಿಜೆಪಿ ಕರ್ನಾಟಕ ಪಕ್ಷದವರಿಗೆ ಕಿಂಚಿತ್ತಾದರೂ ನೈತಿಕತೆ ಇದೆಯೇ? ಬಿ.ಕೆ.ಹರಿಪ್ರಸಾದ್

Published

on

ಬೆಂಗಳೂರು. ಜ.22 : ಸದನದಲ್ಲಿ ಬಟ್ಟೆ ಹರಿದುಕೊಂಡು, ಕೈ ಕೈ ಮಿಲಾಯಿಸಿಕೊಂಡ ಗೂಂಡಾಗಳಂತೆ ವರ್ತಿಸಿದ ಮಹಾನುಭಾವರು ಯಾವ ಪಕ್ಷದವರು? ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಸದನದಲ್ಲೇ ನೀಲಿ ಚಿತ್ರಗಳನ್ನು ವೀಕ್ಷಿಸಿ ದೇಶದ ಜನರೆದುರು ರಾಜ್ಯದ ಮಾನ ಕಳೆದವರು ಯಾವ ಪಕ್ಷದವರು?

ಸಭಾಪತಿಗಳ ಮುಖದ ಮೇಲೆ ಕಾಗದ ಪತ್ರಗಳನ್ನು ಹರಿದು ಬಿಸಾಕಿ ಅವಮಾನ ಮಾಡಿ ಸದನದಿಂದಲೇ ಉಚ್ಛಾಟಿತರಾದವರು ಯಾವ ಪಕ್ಷದವರು? ಇಂತಹ ಶಿಸ್ತು, ಸಂಸ್ಕಾರ, ಗೌರವ, ಘನತೆ ತಂದುಕೊಟ್ಟಿರುವ ಎಲ್ಲರೂ ನಮ್ಮ ಪಕ್ಷದವರೇ ಎಂದು ಎದೆ ತಟ್ಟಿ ಹೇಳುವ ಧೈರ್ಯ ಬಿಜೆಪಿಯವರಿಗೆ ಇದೆಯಾ?

ಸಂವಿಧಾನ ಹುದ್ದೆಯಲ್ಲಿರುವ ರಾಜ್ಯಪಾಲರ ಹುದ್ದೆಯನ್ನೇ ದುರಪಯೋಗ ಪಡಿಸಿಕೊಂಡು ರಾಜ್ಯ ರಾಜಕಾರಣದಲ್ಲೇ ಅತ್ಯಂತ ಕರಾಳ ದಿನವನ್ನು ಸೃಷ್ಟಿ ಮಾಡಿರುವ ಬಿಜೆಪಿ ನಾಯಕರು ಸಂವಿಧಾನದ ಮೌಲ್ಯಗಳ ಬಗ್ಗೆ ಮಾತಾನಾಡಲು ನೈತಿಕತೆ ಇಲ್ಲ.

ರಾಜ್ಯಪಾಲರು ರಾಜ್ಯದ ತೆರಿಗೆಯ ಹಣದಿಂದ ಅಧಿಕಾರ ಅನುಭವಿಸುತ್ತಿದ್ದಾರೆ ಹೊರತು “ನಾಗಪುರ”ದಲ್ಲಿರುವ ನೊಂದಣಿಯೇ ಆಗದ ಸಂಘಟನೆಗೆ ಬರುವ ಬಿಟ್ಟಿ ಹಣದಿಂದಲ್ಲ. ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸಿದರೆ ರಾಜ್ಯಪಾಲರೇ ಇರಲಿ, ಸಾಂವಿಧಾನಿಕ ಹುದ್ದೆಯಲ್ಲೇ ಇರಲಿ ನಮ್ಮ ಹಕ್ಕನ್ನು ಪ್ರತಿಪಾದಿಸುತ್ತಲೇ ಇರುತ್ತೇವೆ. ಬಿಜೆಪಿಯವರಿಂದ ನೈತಿಕತೆ ಕಲಿಯುವ ದಾರಿದ್ರ್ಯ ನಮಗೆ ಬಂದಿಲ್ಲ, ಬರುವುದೂ ಇಲ್ಲ. ಎಂದು ಹರಿಪ್ರಸಾದ್ ಅವರು ಘರ್ಜಿಸಿದರು

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version