Published
4 weeks agoon
By
Akkare News
ಉಪ್ಪಿನಂಗಡಿ: ಹಗಲು ರೌಂಡ್ಸ್ ವೇಳೆ ಅನುಮಾನಾಸ್ಪದವಾಗಿ ತಂಗಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು, ಆತನಿಂದ ಎಂ.ಡಿ.ಎಂ.ಎ. ಮಾದಕ ವಸ್ತು ಹಾಗೂ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದಾರೆ.
ಪಂಚರ ಸಮ್ಮುಖದಲ್ಲಿ ನಡೆಸಿದ ಮಹಜರಿನಲ್ಲಿ ಆತನಿಂದ 2.16 ಗ್ರಾಂ ಎಂ.ಡಿ.ಎಂ.ಎ. (ಅಂದಾಜು ಮೌಲ್ಯ ₹3,000), ಒಂದು ಐಫೋನ್ (₹45,000) ಹಾಗೂ ಒಂದು ಸ್ಯಾಮ್ಸಂಗ್ ಕೀಪ್ಯಾಡ್ ಮೊಬೈಲ್ (₹1,000) ಸೇರಿದಂತೆ ಒಟ್ಟು ₹49,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಕ್ರ. 19/2026) ದಾಖಲಿಸಲಾಗಿದ್ದು, ಎನ್‌ಡಿಪಿಎಸ್ ಕಾಯ್ದೆಯ ಕಲಂ 8(ಸಿ), 22(ಬಿ) ಅಡಿಯಲ್ಲಿ ತನಿಖೆ ಮುಂದುವರಿದಿದೆ.