Published
3 weeks agoon
By
Akkare News
ಮಂಗಳೂರು/ಉಡುಪಿ: ಪವಿತ್ರ ರಮಝಾನ್ ಮಾಸದ ಪ್ರಥಮ ಚಂದ್ರದರ್ಶನವು ಮಂಗಳವಾರ ಕಂಡುಬರದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಫೆಬ್ರವರಿ 19, ಗುರುವಾರದಿಂದ ರಮಝಾನ್ ಉಪವಾಸ ಆಚರಣೆ ಆರಂಭವಾಗಲಿದೆ ಎಂದು ಧಾರ್ಮಿಕ ಮುಖಂಡರು ಘೋಷಿಸಿದ್ದಾರೆ.
ಮಂಗಳವಾರ ಸಂಜೆ ಚಂದ್ರದರ್ಶನವಾದ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರದಿಂದ ಉಪವಾಸ ವ್ರತ ಆರಂಭಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರು ನಿರ್ದೇಶನ ನೀಡಿದ್ದಾರೆ. ಈ ಕುರಿತು ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಎಸ್.ಎಂ. ರಶೀದ್ ಹಾಜಿ ಮಾಹಿತಿ ನೀಡಿದ್ದಾರೆ.