Published
2 months agoon
By
Akkare News
ಮಂಗಳೂರು : ಮಧ್ಯಪ್ರಾಚ್ಯ ಯುದ್ಧ ಕಾರ್ಮೋಡದಿಂದ ಕರಾವಳಿ ಭಾಗದಿಂದ ವಿದೇಶಕ್ಕೆ ರಫ್ತಾಗುತ್ತಿದ್ದ ಮಲ್ಲಿಗೆ ಹೂವುಗಳ ಬೇಡಿಕೆ ಕಮರಿದರೆ, ಮೀನುಗಳ ರಫ್ತು ಬಹುತೇಕ ಸ್ಥಗಿತಗೊಂಡಿದೆ. ಇದು ಕರಾವಳಿಯ ಆರ್ಥಿಕ ವ್ಯವಸ್ಥೆಯ ಮೇಲೆ ಭಾರಿ ಪರಿಣಾಮ ಬೀರಲಿದ್ದು, ವಿಶೇಷವಾಗಿ ಕಸ್ಟಮ್ಸ್ ಇಲಾಖೆಯ ಆದಾಯಕ್ಕೆ ಹೊಡೆತ ಬೀಳಲಿದೆ.
ದುಬೈ, ಅಬುಧಾಬಿ, ಕುವೈಟ್, ಸೌದಿ, ಕತಾರ್ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ಕನ್ನಡಿಗರ ಸಂಖ್ಯೆ 8 ಲಕ್ಷಕ್ಕೂ ಅಧಿಕವಿದೆ. ಅವರ ಬೇಡಿಕೆಯ ಮೇರೆಗೆ ಮಂಗಳೂರಿನಿಂದ ಹೂ, ಮೀನು, ತರಕಾರಿ, ಹಣ್ಣುಹಂಪಲು, ಬಿಡಿಭಾಗಗಳು ಕಾರ್ಗೋ ಮುಖಾಂತರ ಸಾಗಾಟ ಮಾಡಲಾಗುತ್ತಿತ್ತು. ಮುಂಬಯಿ ಏಜೆಂಟರು, ಮಂಗಳೂರು ಮತ್ತು ಉಡುಪಿಯಿಂದ ತಮಗೆ ಬೇಕಾದಷ್ಟು ಮಲ್ಲಿಗೆ ಹೂ ಆರ್ಡರ್ ಮಾಡುತ್ತಾರೆ. ದಿನಕ್ಕೆ 250-300 ಅಟ್ಟೆ ಮಲ್ಲಿಗೆ ಮುಂಬಯಿಗೆ ಕಳುಹಿಸಿದರೆ ಅದರಲ್ಲಿ 150-200 ಆಟ್ಟೆ ಮಲ್ಲಿಗೆ ಕೊಲ್ಲಿ ರಾಷ್ಟ್ರಕ್ಕೆ ಕಳುಹಿಸಿಕೊಡುತ್ತಾರೆ ಎಂದು ರಖಂ ಮಲ್ಲಿಗೆ ವ್ಯಾಪಾರಿ ವಿನ್ಸೆಂಟ್