Connect with us

ಇತರ

ಇನ್ನು ಟೋಲ್ ಪ್ಲಾಜಾ ಬಂದ್… ನಿಲ್ಲುವಂತಿಲ್ಲ: ನಿತಿನ್ ಗಡ್ಕರಿ ನೀಡಿದ ಭರ್ಜರಿ ಸಿಹಿ ಸುದ್ದಿ

Published

on

ನೀವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ಇನ್ನು ಮುಂದೆ ಟೋಲ್ ಕಟ್ಟಲು ಸಾಲಿನಲ್ಲಿ ನಿಲ್ಲುವ ಕಿರಿಕಿರಿ ಇರುವುದಿಲ್ಲ!. ಹೌದು, 2026ರ ಅಂತ್ಯದ ವೇಳೆಗೆ ದೇಶಾದ್ಯಂತ ಭೌತಿಕವಾಗಿ ಇರುವ ಟೋಲ್ ಪ್ಲಾಜಾಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.
ಟೈಮ್ಸ್ ಡ್ರೈವ್ ಆಟೋ ಸಮಿಟ್ 2026′ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಹನ ಸವಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

 ಏನಿದು ಹೊಸ ಸಿಸ್ಟಮ್? ಈಗಿರುವ ಟೋಲ್ ಬೂತ್‌ಗಳ ಬದಲಿಗೆ ‘ಮಲ್ಟಿ-ಲೇನ್ ಫ್ರೀ ಫ್ಲೋ’ (MLFF) ಎಂಬ ಅತ್ಯಾಧುನಿಕ ತಂತ್ರಜ್ಞಾನ ಬರಲಿದೆ. ಹೆದ್ದಾರಿಗಳ ಮೇಲೆ ಅಳವಡಿಸಲಾಗುವ ವಿಶೇಷ ಕ್ಯಾಮೆರಾಗಳು ಮತ್ತು ಸೆನ್ಸಾರ್‌ಗಳು ನಿಮ್ಮ ವಾಹನದ ನಂಬರ್ ಪ್ಲೇಟ್ ಹಾಗೂ ಫಾಸ್ಟ್‌ಟ್ಯಾಗ್ (FASTag) ವಿವರಗಳನ್ನು ಚಲನೆಯಲ್ಲಿರುವಾಗಲೇ ಗುರುತಿಸುತ್ತವೆ. ನೀವು ಗಂಟೆಗೆ 80 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದರೂ ನಿಮ್ಮ ವಾಹನದ ವಿವರಗಳನ್ನು ಸಿಸ್ಟಮ್ ಸೆರೆಹಿಡಿಯುತ್ತದೆ. ನೀವು ಕ್ರಮಿಸಿದ ಕಿಲೋಮೀಟರ್ ಆಧಾರದ ಮೇಲೆ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಯಿಂದ ಕಡಿತವಾಗುತ್ತದೆ, ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement