Published
7 hours agoon
By
Akkare News
ಏನಿದು ಹೊಸ ಸಿಸ್ಟಮ್? ಈಗಿರುವ ಟೋಲ್ ಬೂತ್‌ಗಳ ಬದಲಿಗೆ ‘ಮಲ್ಟಿ-ಲೇನ್ ಫ್ರೀ ಫ್ಲೋ’ (MLFF) ಎಂಬ ಅತ್ಯಾಧುನಿಕ ತಂತ್ರಜ್ಞಾನ ಬರಲಿದೆ. ಹೆದ್ದಾರಿಗಳ ಮೇಲೆ ಅಳವಡಿಸಲಾಗುವ ವಿಶೇಷ ಕ್ಯಾಮೆರಾಗಳು ಮತ್ತು ಸೆನ್ಸಾರ್‌ಗಳು ನಿಮ್ಮ ವಾಹನದ ನಂಬರ್ ಪ್ಲೇಟ್ ಹಾಗೂ ಫಾಸ್ಟ್‌ಟ್ಯಾಗ್ (FASTag) ವಿವರಗಳನ್ನು ಚಲನೆಯಲ್ಲಿರುವಾಗಲೇ ಗುರುತಿಸುತ್ತವೆ. ನೀವು ಗಂಟೆಗೆ 80 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದರೂ ನಿಮ್ಮ ವಾಹನದ ವಿವರಗಳನ್ನು ಸಿಸ್ಟಮ್ ಸೆರೆಹಿಡಿಯುತ್ತದೆ. ನೀವು ಕ್ರಮಿಸಿದ ಕಿಲೋಮೀಟರ್ ಆಧಾರದ ಮೇಲೆ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಯಿಂದ ಕಡಿತವಾಗುತ್ತದೆ, ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.