Connect with us

ಸ್ಥಳೀಯ

ಪ್ರಭು ಶ್ರೀರಾಮಚಂದ್ರನ ಕುರಿತು ಪ್ರೊ.ಭಗವಾನ್ ಅವರು ಅವಹೇಳನಕಾರಿ ಹೇಳಿಕೆ-ಭಗವಾನ್ ಹಿಂದೂ ಧರ್ಮದ ಭಾವನೆಯನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ ;ಸುಮೊಟೊ ಕೇಸ್ ದಾಖಲಿಸಲು ಒತ್ತಾಯಿಸುತ್ತೇನೆ – ಶಾಸಕ ಅಶೋಕ್ ಕುಮಾರ್ ರೈ

Published

on

​ಪುತ್ತೂರು: ಪ್ರಭು ಶ್ರೀರಾಮಚಂದ್ರನ ಕುರಿತು ಪ್ರೊ.ಭಗವಾನ್ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದು, ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಾಸಕ ಅಶೋಕ್ ಕುಮಾರ್ ರೈ ಅವರು “ಭಗವಾನ್ ಯಾವ ಧರ್ಮವನ್ನು ನಂಬುತ್ತಾರೆ ಎಂದು ನಮಗೆ ಗೊತ್ತಿಲ್ಲ. ಅವರು ಹಿಂದೂ ಧರ್ಮದ ಭಾವನೆಯನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ. ಇಂತಹ ಹೇಳಿಕೆಯಿಂದ ಅವರಿಗೆ ಯಾವುದೇ ಪ್ರಯೋಜನವಿಲ್ಲ” ಎಂದು ಅವರು ಹೇಳಿದರು.

 

​ “ಇಂತಹವರ ವಿರುದ್ಧ ಕೂಡಲೇ ಕೇಸ್ ಹಾಕಿ ಬಂಧಿಸಬೇಕು. ಭಗವಾನ್ ಮೇಲೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಯಾವುದೇ ಹಿಂದೂ ಸಂಘಟನೆಯು ಗೃಹ ಸಚಿವರಿಗೆ, ಮುಖ್ಯಮಂತ್ರಿಯವರಲ್ಲಿ ಮಾತನಾಡಿ ಮನವಿ ಮಾಡಿ ಎಂದು ನನ್ನಲ್ಲಿ ಹೇಳಿಲ್ಲ. ಆದರೂ ಅವರವರ ಧರ್ಮ ಅವರವರಿಗೆ ಮುಖ್ಯ, ಅದು ನಂಬಿಕೆ” ಎಂದು ಅಶೋಕ್ ರೈ ತಿಳಿಸಿದರು. ಈ ಬಗ್ಗೆ ಗೃಹ ಸಚಿವ ಹಾಗೂ ಮುಖ್ಯಮಂತ್ರಿಯವರಲ್ಲಿ ಮಾತನಾಡಿ ಭಗವಾನ್ ಮೇಲೆ ಸುಮೊಟೊ ಕೇಸ್ ದಾಖಲಿಸಲು ಒತ್ತಾಯಿಸುತ್ತೇನೆ” ಎಂದು ಅವರು ಆಗ್ರಹಿಸಿದರು.

​ಭಾನುವಾರದಂದು ಶಾಶಕ ಅಶೋಕ್ ರೈ ಅವರು ಕುಡಿಪ್ಪಾಡಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮಕ್ಕೆ ತೆರಳಿದ್ದರು. ಗ್ರಾಮದ ಎಸ್ ಟಿ ಕಾಲನಿಗೆ ತೆರಳುವ ರಸ್ತೆಗೆ ೧೦ ಲಕ್ಷ ಅನುದಾನವನ್ನು ನೀಡಿದ್ದು ಅದರ ಕಾಮಗಾರಿ ಪೂರ್ಣಗೊಂಡಿದೆ. ಈ ರಸ್ತೆಯ ಉದ್ಘಾಟನೆಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಹರೀಶ್ ನಾಯಕ್ ಭಾಗವಹಿಸಿದ್ದರು. ಇದೇ ರಸ್ತೆಯ ಮೂಲಕ ಹರೀಶ್‌ರವರು ತೆರಳುವುದಾಗಿದೆ. ಇವರನ್ನು ಕಂಡ ಕೂಡಲೇ ಶಾಸಕರು ಅಭಿವೃದ್ದಿಯಾಗಿಲ್ಲ ಎಂದು ಕೆಲವರು ಸುದ್ದಿಗೋಷ್ಠಿ ನಡೆಸಿದ್ದನ್ನು ನಾನು ಮಾಧ್ಯಮದಲ್ಲಿ ನೋಡಿದ್ದೆ. ಇದೀಗ ಉದ್ಘಾಟನೆಯಾಗುತ್ತಿರುವುದು ಅಭಿವೃದ್ದಿಯಲ್ವ? ಎಂದು ಕೇಳಿದರು. ಬಳಿಕ ಹರೀಶ್‌ರವರ ಮೂಲಕವೇ ನೂತನ ರಸ್ತೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನೆಯನ್ನೂ ಮಾಡಿಸಿದ್ದಾರೆ. ಈ ವೇಳೆ ಕೆಲವು ಮಂದಿ ಸ್ಥಳೀಯ ಯುವಕರು ಸುದ್ದಿಗೋಷ್ಠಿ ನಡೆಸಿದವರು ಸಂಸದರ ಅನುದಾನವನ್ನು ತಂದು ಕುಡಿಪ್ಪಾಡಿ ಗ್ರಾಮಕ್ಕೆ ಸುರಿಯುವಂತೆ ಹೋರಾಟ ಮಾಡಲಿ ಎಂದು ತಾಕೀತು ಮಾಡಿದರು. ೨.೮೪ ಲಕ್ಷ ಅನುದಾನ ನೀಡಿದ್ದೇನೆ ಈ ವೇಳೆ ಮಾತನಾಡಿದ ಶಾಸಕರು ಕುಡಿಪ್ಪಾಡಿ ಗ್ರಾಮಕ್ಕೆ ಎರಡು ವರ್ಷದಲ್ಲಿ ೨.೮೪ ಕೋಟಿ ಅನುದಾನ ನೀಡಿದ್ದೇನೆ. ಸಣ್ಣ ಗ್ರಾಮವಾದರೂ ದೊಡ್ಡ ಮೊತ್ತದ ಅನುದಾನವನ್ನು ನೀಡಿದ್ದೇನೆ. ಎಲ್ಲಿಯೂ ತಾರತಮ್ಯ ಮಾಡಿಲ್ಲ. ಅಭಿವೃದ್ದಿಯಾಗಿಲ್ಲ ಎಂದು ಸುದ್ದಿಗೋಷ್ಠಿ ನಡೆಸಿದವರು ರಾಜಕೀಯ ಪ್ರೇರಿತ ಸುದ್ದಿಗೋಷ್ಠಿಯಗಿತ್ತು. ಇಲ್ಲಿ ಆಗಿರುವ ಕೆಲಸವನ್ನು ಒಮ್ಮೆ ಪರಿಶೀಲನೆ ಮಾಡಲಿ. ಇವತ್ತು ೭೮ ಲಕ್ಷ ರೂ ಅನುದಾನದಲ್ಲಿ ವಿವಿಧ ಶಿಲಾನ್ಯಾಸ ಮಾಡಿದ್ದೇನೆ. ಮುಂದೆಯೂ ಈ ಗ್ರಾಮಕ್ಕೆ ಅನುದಾನ ನೀಡುತ್ತೇನೆ. ನಮಗೆ ಗ್ರಾಮದ ಅಭಿವೃದ್ದಿ ಮುಖ್ಯ ರಾಜಕೀಯ ಮಾಡುವವರು ಅದನ್ನೇ ಮಾಡುತ್ತಿರಲಿ. ಕಬಕದಿಂದ ಕುಂಡಡ್ಕ ರಸ್ತೆಗೆ ೪ ಕೋಟಿ ಅನುದಾನ ಮಂಜೂರಾಗಿದೆ. ಕೆಲವು ಕಡೆಗಳಲ್ಲಿ ಡಾಮಾರು ರಸ್ತೆಗಳು ಹೊಂಡ ಬಿದ್ದಿದೆ ಇದಕ್ಕೂ ೨೫ ಲಕ್ಷ ಅನುದಾನ ಮಂಜೂರಾಗಿದೆ. ಮಳೆಗಾಲದಲ್ಲಿ ಕಾಮಗಾರಿ ನಡೆಸಲು ಕಷ್ಟವಾದರೆ ಹೊಂಡಗಳನ್ನು ಮುಚ್ಚುವ ಕಾಮಗಾರಿ ನಡೆಯಲಿದೆ ಎಂದು ಹೇಳಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version