ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈಯವರಿಗೆ ಸಚಿವ ಸ್ಥಾನಕ್ಕಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು.
ಪುತ್ತೂರು ವಿಧಾನಸಭಾ ಕ್ಷೇತ್ರದ ಅಕ್ರಮ ಸಮಿತಿ ಸದಸ್ಯರು ಮತ್ತು ವಿಟ್ಲ ಬ್ಲಾಕ್ ಕಾಂಗ್ರೆಸ್ ನ ಎಸ್ ಸಿ ಘಟಕದ ಅಧ್ಯಕ್ಷರು ಆಗಿರುವ ರಾಮಣ್ಣ ಪಿಲಿಂಜ ಇವರು ಇಂದು ಪುತ್ತೂರು ಶ್ರೀ ಮಹಾಲಿಂಗೆಶ್ವರ ದೇವಸ್ಥಾನದಲ್ಲಿ , ಪುತ್ತೂರು ಶಾಸಕರಿಗೆ ನೂತನ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಗಲಿ ಎಂದು ವಿಶೇಷ ಪ್ರಾರ್ಥನೆ ಮಾಡಿದರು.ನಂತರ ಮಾಧ್ಯಮದೊಂದಿಗೆ ಮಾತನಾಡಿದ ರಾಮಣ್ಣ ಪಿಲಿಂಜರವರು ನಮ್ಮಂತ ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಿ, ನಮಗೆ ಸ್ಥಾನಮಾನ ನೀಡಿ ಬಡವರ ಪಾಲಿನ ಆಶಾಕಿರಣವಾಗಿರುವ ಮತ್ತು ಪುತ್ತೂರಿನ ಸಮಗ್ರ ಅಭಿವೃದ್ಧಿಯ ಚಿಂತನೆಯನ್ನು ಸದಾ ಮಾಡುತ್ತಾ ಬಂದಿರುವ ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಯವರು ನೂತನ ಸಚಿವ ಸಂಪುಟದ ಮಂತ್ರಿಯಾಗಿ ಈ ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾಗಿ ಆದಷ್ಟು ಬೇಗ ಬರಲಿ ಮತ್ತು ಅವರಿಂದ ಪುತ್ತೂರು ಮತ್ತು ದಕ್ಷಿಣಕನ್ನಡ ಜಿಲ್ಲೆಯ ಅಭಿವೃದ್ಧಿ ಅತೀ ಶ್ರೀಘ್ರದಲ್ಲಿ ಆಗಲಿ ಎಂದು ಹೇಳಿದರು.