Published
13 hours agoon
By
Akkare News
ಬಾಕಿಲ ‘ಶ್ರೀ ಸಾಯಿದುರ್ಗಾ ನಿಲಯ’ದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ‘ತುಳಸಿ ವೈಭವ’ ಕಾರ್ಯಕ್ರಮವು ಜರುಗಿತು . ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಕೆಎಸ್ಆರ್ಟಿಸಿ ಕುಶಲಕರ್ಮಿ ಸುನಿಲ್ ಕುಮಾರ್ ಬಿ.ಕೆ. ಮಾತನಾಡಿ, ಹಿರಿಯರು ಹಾಕಿಕೊಟ್ಟ ಹಿಂದಿನ ಆಚಾರ-ವಿಚಾರ ಹಾಗೂ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ಯುವವಾಹಿನಿ ಘಟಕವು ನಡೆಸುತ್ತಿರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಯುವವಾಹಿನಿ ಸದಸ್ಯರಿಂದ ಭಜನಾ ಕಾರ್ಯಕ್ರಮ ಜರುಗಿತು. ಸುರೇಶ್ ಶಾಂತಿ ಅವರ ಪೌರೋಹಿತ್ಯದಲ್ಲಿ ವಿಧಿವತ್ತಾಗಿ ತುಳಸಿ ಪೂಜೆ ನೆರವೇರಿತು. ಇದೇ ವೇಳೆ ಕಾರ್ಯಕ್ರಮಕ್ಕೆ ಆತಿಥ್ಯ ವಹಿಸಿದ್ದ ಪುರುಷೋತ್ತಮ ದಂಪತಿಗಳನ್ನು ಘಟಕದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಆಂಬುಲೆನ್ಸ್ ಸೇವಾರ್ಥ ಆಯೋಜಿಸಲಾಗಿದ್ದ ಲಕ್ಕಿ ಡಿಪ್ ಡ್ರಾ ಪ್ರಕ್ರಿಯೆಯನ್ನೂ ಇದೇ ಸಂದರ್ಭದಲ್ಲಿ ನಡೆಸಲಾಯಿತು. ವೇದಿಕೆಯಲ್ಲಿ ಯುವವಾಹಿನಿರಿ(ರಿ.)ಕೇಂದ್ರ ಸಮಿತಿಯ ಇದರ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು, ಮಾಣಿ ಶ್ರೀ ನಾರಾಯಣ ಗುರು ಸಹಕಾರ ಸಂಘ (ನಿ.)ಅಧ್ಯಕ್ಷರಾದ ನಾರಾಯಣ ಸಾಲಿಯಾನ್, ಕಾರ್ಯಕ್ರಮದ ಸಂಚಾಲಕರಾದ ಸುಜಿತ್ ಪೂಜಾರಿ ಬಾಕಿಲ, ಮೋಹನ್ ಪೂಜಾರಿ ಮುಜಲ ಹಾಗೂ ಲೋಕನಾಥ ತಿಮರಾಜೆ ಉಪಸ್ಥಿತರಿದ್ದರು. 
ಸಮಾರಂಭದಲ್ಲಿ ಕೇಂದ್ರ ಸಮಿತಿಯ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ಹರೀಶ್ ಬಾಕಿಲ, ಮಾಜಿ ಅಧ್ಯಕ್ಷರುಗಳಾದ ರಾಜೇಶ್ ಪೂಜಾರಿ ಬಾಬನಕಟ್ಟೆ, ರಮೇಶ್ ಪೂಜಾರಿ ಮುಜಲ, ಜಯಂತ ಬರಿಮಾರು, ನಾಗೇಶ್ ಕೊಂಕಣಪದವು, ಶಿವರಾಜ್ ಪಿ.ಆರ್., ಘಟಕದ ಒಂದನೇ ಉಪಾಧ್ಯಕ್ಷರಾದ ಸುಜಿತ್ ಅಂಚನ್ ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು. ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷರಾದ ಗಣೇಶ್ ಪೂಜಾರಿ ಕೊಡಾಜೆ ಸ್ವಾಗತಿಸಿದರು. ಕಾರ್ಯದರ್ಶಿ ವಿಶ್ವನಾಥ ಪೂಜಾರಿ ವಂದಿಸಿದರು. ಪ್ರಶಾಂತ್ ಬಿ. ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.




