ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಧಾರ್ಮಿಕ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ಸಾಮಾನ್ಯ ಸ್ಥಳೀಯ
ಆರ್ಯಾಪು : 90 ಮನೆಗಳಿಗೆ ಕುಡಿಯುವ ನೀರಿನ ಅಭಾವ, ಶಾಸಕರ ಅಶೋಕ್ ಕುಮಾರ್ ರೈ ಯವರ ಸೂಚನೆಯ ಮೇರೆಗೆ ಕೊಳವೆ ಬಾವಿ ಕೊರೆಯಲು ತಾಲೂಕು ಆಡಳಿತ ಅಧಿಕಾರಿ ಸೂಚನೆ, ಸ್ಥಳೀಯರ ವಿರೋಧದ ನಡುವೆಯೂ ಕೊಳವೆ ಬಾವಿ ತೆಗೆದ ಅಧಿಕಾರಿಗಳು ಫಲಾನುಭವಿಗಳಿಂದ ಶಾಸಕರಿಗೆ ಅಭಿನಂದನೆ.Published
8 months agoon
By
Akkare Newsಪುತ್ತೂರು: ಸಾರ್ವಜನಿಕ ಸ್ಥಳದಲ್ಲಿ ಕೊಳವೆ ಬಾವಿ ತೆಗೆಯಲು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದ್ದು ಬಳಿಕ ಸ್ಥಳಕ್ಕೆ ತಹಶಿಲ್ದಾರ್ ಭೇಟಿ ನೀಡಿ ಸಮಸ್ಯೆಯನ್ನು ಇತ್ಯರ್ಥ ಪಡಿಸಿ ನಿಗದಿತ ಸ್ಥಳದಲ್ಲೇ ಕೊಳವೆ ಬಾವಿ ತೆಗೆಸಿದ ಘಟನೆ ಆರ್ಯಾಪು ಗ್ರಾಮದ ಕಂಬಳದಡ್ಡ ಎಂಬಲ್ಲಿ ನಡೆದಿದೆ.
ಕಂಬಳದಡ್ಡ ಪರಿಸರದ ಸುಮಾರು 90 ಮನೆಗಳಿಗೆ ಕುಡಿಯಲು ನೀರಿಲ್ಲದೆ ವಾರಗಳೇ ಕಳೆದಿದೆ. ಕಾಲನಿಗೆ ನೀರು ಪೂರೈಕೆ ಮಾಡಲು ಕಂಬಳದಡ್ಡದಲ್ಲಿ ಕೊಳವೆ ಬಾವಿ ತೆಗೆಯಲು ಆರ್ಯಾಪು ಗ್ರಾಪಂ ಸ್ಥಳ ಗುರುತುಮಾಡಿತ್ತು. ಮೇ.6 ರಂದು ಕೊಳವೆ ಬಾವಿ ತೆಗೆಯಲು ಮುಂದಾದಾಗ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು.
ಇದರಿಂದ ಕೊಳವೆ ಬಾವಿ ಕೆಲಸ ಅರ್ದಕ್ಕೆ ಮೊಟಕುಗೊಂಡಿತ್ತು. ಆ ಬಳಿಕ ಸ್ಥಳಕ್ಕೆ ತಹಶಿಲ್ದಾರ್, ಸರ್ಕಲ್ ಇನ್ಸ್ ಪೆಕ್ಟರ್ ಸೇರಿದಂತೆ ಕೆಲವು ಅಧಿಕಾರಿಗಳು ಆಗಮಿಸಿದರು. ಈ ವೇಳೆ ಮಾತನಾಡಿದ ತಹಶಿಲ್ದಾರ್ ಸಾರ್ವಜನಿಕ ಸ್ಥಳದಲ್ಲಿ ಗ್ರಾಪಂ ಕೊಳವೆ ಬಾವಿ ತೆಗೆಯುತ್ತಿದೆ.
ಅಡ್ಡಿಪಡಿಸುವ ಕೆಲಸಕ್ಕೆ ಯಾರೂ ಮುಂದಾಗಬಾರದು. ಅಡ್ಡಪಡಿಸಿದರೆ ಕೇಸು ಮಾಡಲಾಗುವುದು ಎಂದು ತಿಳಿಸಿದ ಅವರು ಸ್ಥಲದ ಸುತ್ತ ಮುತ್ತ 144 ಸೆಕ್ಸನ್ ಜಾರಿಗೊಳಿಸಿ ಅಲ್ಲಿ ಸೇರಿದ್ದವರನ್ನು ಪೊಲೀಸರು ಚದುರಿಸಿದರು.ಬಳಿಕ ಕಾಮಗಾರಿ ಆರಂಭವಾಯಿತು