ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಇಂದಿನಿಂದ (ಜು.1) ದೇಶದಲ್ಲಿ ಮೂರು ಹೊಸ ಕಾನೂನು ಜಾರಿ – ಏನೆಲ್ಲಾ ಬದಲಾವಣೆ..? ಕಂಪ್ಲೀಟ್‌ ಡೀಟೆಲ್ಸ್‌ ಇಲ್ಲಿದೆ.

Published

on

ದೇಶದಲ್ಲಿ ಇಂದಿನಿಂದ (ಜುಲೈ 1) ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. ಬ್ರಿಟೀಷರ ಕಾಲದಿಂದ ಜಾರಿಯಲ್ಲಿದ್ದ ಐಪಿಸಿ, ಸಿಆರ್‌ಪಿಸಿ, ಇಂಡಿಯನ್ ಎವಿಡೆನ್ಸ್ ಆಕ್ಟ್ಗೆ ಗುಡ್‌ಬೈ ಹೇಳಲಾಗ್ತಿದೆ.

ಮೂರು ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತಾ (Indian Code), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (Indian Civil Protection Code) ಮತ್ತು ಭಾರತೀಯ ಸಾಕ್ಷಿ ಕಾಯ್ದೆ (Indian Evidence Act) ಇಂದಿನಿಂದ ಜಾರಿಗೆ ಬರಲಿವೆ. ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು 1872ರ ಭಾರತೀಯ ಸಾಕ್ಷಿ ಕಾಯ್ದೆಗೆ ತಿದ್ದುಪಡಿ ಮಾಡಿ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯ್ದೆ ಎಂದು ಬದಲಿಸಲಾಗಿದೆ.

 

ಭಾರತೀಯ ನ್ಯಾಯ ಸಂಹಿತೆಯು 358 ಸೆಕ್ಷನ್ ಒಳಗೊಂಡಿದೆ. 20 ಹೊಸ ಅಪರಾಧಗಳು ಸೇರಿಸಲ್ಪಟ್ಟಿವೆ, 33 ಅಪರಾಧಗಳ ಶಿಕ್ಷೆ ಅವಧಿ ಹೆಚ್ಚಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 531 ಸೆಕ್ಷನ್ ಒಳಗೊಂಡಿದ್ದು, 177 ಕಲಂಗಳನ್ನ ಬದಲಿಸಲಾಗಿದೆ. ಇನ್ನೂ ಭಾರತೀಯ ಸಾಕ್ಷ್ಯ ಅಧಿನಿಯಮ 170 ಸೆಕ್ಷನ್ ಒಳಗೊಂಡಿದೆ. ಹೊಸ ಕಾನೂನುಗಳ ಬಗ್ಗೆ ವಕೀಲರ ಸಮುದಾಯದಿಂದ ಆಕ್ಷೇಪ ವ್ಯಕ್ತವಾಗ್ತಿದೆ. ಇದರ ನಡುವೆಯೇ ಹೊಸ ಕಾನೂನು ಜಾರಿಗೆ ಪೊಲೀಸ್ ಇಲಾಖೆ ಸನ್ನದ್ಧವಾಗ್ತಿದೆ. ಈಗಾಗಲೇ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಕಾನೂನು ತಜ್ಞರು, ಹಿರಿಯ ವಕೀಲರಿಂದ ಪೊಲೀಸರಿಗೆ ತರಬೇತಿ ಸಹ ನೀಡಲಾಗಿದೆ. ಜೊತೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶಾಲೆ, ಕಾಲೇಜು ಆಸ್ಪತ್ರೆಗಳಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಕಾನೂನು.. ಏನೆಲ್ಲಾ ಬದಲಾವಣೆ..?

  • ಪೊಲೀಸ್ ಕಸ್ಟಡಿ ಗರಿಷ್ಠ ಅವಧಿ 14 ದಿನದಿಂದ 60 ದಿನಗಳವರೆಗೂ ಹೆಚ್ಚಳ
  • 3-7 ವರ್ಷ ಶಿಕ್ಷೆಯಾಗುವ ಕೇಸ್‌ಗಳಲ್ಲಿ ದೂರು ನೀಡಿದ 24 ಗಂಟೆಯೊಳಗೆ ಎಫ್‌ಐಆರ್
  • 3-7 ವರ್ಷ ಶಿಕ್ಷೆಯಾಗುವ ಕೇಸ್‌ಗಳ ತನಿಖೆಯನ್ನು 14 ದಿನದಲ್ಲಿ ಒಂದು ಹಂತಕ್ಕೆ ತರಬೇಕು
  • 7 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಆಗುವ ಪ್ರಕರಣಗಳಲ್ಲಿ ಫೊರೆನ್ಸಿಕ್ ತನಿಖೆ ಕಡ್ಡಾಯ
  • ಆರ್ಥಿಕ ಅಪರಾಧ ಕೇಸ್‌ಗಳಲ್ಲಿ ಪೊಲೀಸರಿಗೆ ಸ್ಥಿರಾಸ್ತಿ-ಚರಾಸ್ತಿ ಜಪ್ತಿ ಮಾಡುವ ಅಧಿಕಾರ
  • ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ಕೇಸ್.. 2 ತಿಂಗಳಲ್ಲಿ ತನಿಖೆ ಮುಗಿಸಬೇಕು
  • ರೇಪ್ ಕೇಸ್‌ಗಳಲ್ಲಿ ಸಂತ್ರಸ್ತೆ ಹೇಳಿಕೆಯನ್ನು ಆಡಿಯೋ, ವೀಡಿಯೋ ಮೂಲಕ ದಾಖಲು
  • ಪೋಕ್ಸೋ ಕೇಸ್‌ಗಳಲ್ಲಿ ಸಂತ್ರಸ್ತರ ಹೇಳಿಕೆಯನ್ನು ಮಹಿಳಾ ಅಧಿಕಾರಿ ಕೂಡ ದಾಖಲಿಸಿಕೊಳ್ಳಬಹುದು
  • ಕ್ರಿಮಿನಲ್ ಕೇಸ್ ವಿಚಾರಣೆ.. ಕೋರ್ಟ್ ಗರಿಷ್ಠ 2-3 ವಾಯಿದೆಗಳನ್ನು ಮಾತ್ರ ನೀಡಬೇಕು
  • ತನಿಖೆ, ಕೋರ್ಟ್ ಸನ್ಸ್‌ಗಳನ್ನು ವಾಟ್ಸಪ್ ಸೇರಿ ಡಿಜಿಟಲ್ ರೂಪದಲ್ಲಿಯೇ ಕಳಿಸಬಹುದು
  • ಕೇಸ್ ನಮೂದು-ಕೋರ್ಟ್ ವಿಚಾರಣೆವರೆಗೂ ಸಂತ್ರಸ್ತರಿಗೆ ವಾಟ್ಸಪ್ ಮೂಲಕ ಪ್ರತಿಹಂತದ ಮಾಹಿತಿ
  • ರೇಡ್ ಪ್ರಕ್ರಿಯೆಯ ಕಡ್ಡಾಯ ಚಿತ್ರೀಕರಣ, 48 ಗಂಟೆಯಲ್ಲಿ ಕೋರ್ಟ್‌ಗೆ ವರದಿ ಸಲ್ಲಿಕೆ
  • ಸಂತ್ರಸ್ತರು ಠಾಣೆಗೆ ಹೋಗದೆಯೂ ಆನ್‌ಲೈನ್ ಮೂಲಕ ದೂರು ನೀಡಬಹುದು
  • ಮಹಿಳೆಯರು, ವಿಕಲಚೇತನರು, ರೋಗಿಗಳು, ಮಕ್ಕಳು, ಹಿರಿಯರು ಠಾಣೆಗೆ ಹೋಗುವ ಅಗತ್ಯವಿಲ್ಲ
  • ಈ ಐದು ವರ್ಗದ ಮಂದಿ ತಾವಿರುವ ಕಡೆಯೇ ಪೊಲೀಸರನ್ನು ಕರೆಸಬಹುದು
  • ಯಾವುದೇ ಘಟನೆಯ ಮಾಹಿತಿಯನ್ನು ಆನ್‌ಲೈನ್ ಮೂಲಕ ಯಾವ ಠಾಣೆಗಾದ್ರೂ ತಿಳಿಸಬಹುದು
  • ಝೀರೋ ಎಫ್‌ಐಆರ್, ಠಾಣಾ ವ್ಯಾಪ್ತಿ ಲೆಕ್ಕಿಸದೇ ಯಾವ ಠಾಣೆಗಾದ್ರೂ ದೂರು ಸಲ್ಲಿಸಬಹುದು
  • ಆರೋಪಿಗಳ ಬಂಧನದ ಬಗ್ಗೆ ಅವರ ಸ್ನೇಹಿತರು, ಕುಟುಂಬ ಸದಸ್ಯರಿಗೆ ಪೊಲೀಸರು ತಿಳಿಸಬೇಕು
  • ಆರೋಪಿಗಳಿಗೆ, ಸಂತ್ರಸ್ತರಿಗೆ ಎಫ್‌ಐಆರ್ ಕಾಪಿ ಉಚಿತವಾಗಿ ನೀಡಬೇಕು.
  • ಮದುವೆ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗುವವರಿಗೆ 10 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದು.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version