Connect with us

ಇತರ

ಪುತ್ತೂರು: ಮೊಬೈಲ್ ಟವರ್ ಬ್ಯಾಟರಿ ಕಳವು ಆರೋಪಿ ಬಂಧನ .ನಿರಂತರವಾಗಿ ಲಾರಿ ಬ್ಯಾಟರಿ ಕಳವು… ಪತ್ತೆ ಯಾಗದ ಕಳ್ಳರು.. ಲಾರಿ ಮಾಲಕರ ಆರೋಪ..!!!

Published

on

ಪುತ್ತೂರು,  : ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನರಿಮೊಗ್ರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ಸೆ 7 ರಿಂದ 13ರ ನಡುವಿನ ಅವಧಿಯಲ್ಲಿ ನಡೆದ ಮೊಬೈಲ್ ಟವರಿಗೆ ಅಳವಡಿಸಿದ್ದ ಬ್ಯಾಟರಿಗಳ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು ಬ್ಯಾಟರಿ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ಕೊಲ್ಲಂ ನಿವಾಸಿ ಇಟ್ಟಿ ಫನಿಕ್ಕರ್ (60) ಎಂದು ಹೆಸರಿಸಲಾಗಿದೆ. ಬಂಧಿತ ಆರೋಪಿಯಿಂದ ಕಳವಾಗಿರುವ ಬ್ಯಾಟರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು. ನ್ಯಾಯಂಗ ಬಂಧನ ವಿಧಿಸಲಾಗಿದೆ.

ಕಳೆದ ವರ್ಷ ಪುರುಷರ ಕಟ್ಟೆಯಲ್ಲಿ ನಿಲ್ಲಿಸಿದ ಹೊಸ ಲಾರಿ ಎರಡು ಬ್ಯಾಟರಿ ಕಳವಾದ ಬಗ್ಗೆ ನಗರ ಠಾಣೆಗೆ ದೂರು ನೀಡಿದ್ದಾರೆ. ಕಳೆದ 15 ದಿನಗಳ ಹಿಂದೆ ಪಂಜಲದಲ್ಲಿ ಲಾರಿ ಬ್ಯಾಟರಿ ಕಳವಾಗಿದೆ ಇದರ ಬಗ್ಗೆ ದೂರು ನೀಡಲಾಗಿದೆ ಇನ್ನು ಕೂಡ ಪತ್ತೆಯಾಗಿಲ್ಲ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version