Published
11 months agoon
By
Akkare News
ಚಿತ್ರದುರ್ಗ: ಒಂದೇ ದಿನ ಇಬ್ಬರು ಯುವತಿಯನ್ನ ಯುವಕನೊಬ್ಬ ಮದುವೆಯಾದ ವಿಶೇಷ ಹಾಗೂ ವಿಚಿತ್ರವಾದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಒಂದೇ ಮಂಟಪದಲ್ಲಿ ಮದುವೆ
ಚಿತ್ರದುರ್ಗ ನಗರದ ಎಂ ಕೆ ಪ್ಯಾಲೆಸ್ ನಲ್ಲಿ ನಿನ್ನೆ ಈ ಮದುವೆ ನಡೆದಿದ್ದು, ಒಂದೇ ಮದುವೆ ಮಂಟಪದಲ್ಲಿ ಇಬ್ಬರನ್ನ ಮದುವೆ ಆಗಿದ್ದಾನೆ. ವಸೀಮ್ ಶೈಖ್ ಎನ್ನುವ ಯುವಕನನ್ನ ಇಬ್ಬರು ಸ್ನೇಹಿತೆಯರು ಮದುವೆ ಆಗಿದ್ದಾರೆ. ಶಿಫಾ ಶೈಖ್, ಜನ್ನತ್ ಮಖಂದರ್ ಎಂಬ ಇಬ್ಬರು ಸ್ನೇಹಿತೆಯರು ಒಬ್ಬನನ್ನೇ ಮದುವೆ ಆಗಿದ್ದು, ಚಿತ್ರದುರ್ಗದ ಹೊರಪೇಟೆಯ ವಸೀಮ್ ಜೊತೆ ಮದುವೆ ಮಾಡಿಕೊಂಡಿದ್ದಾರೆ. ಸದ್ಯ ಇಬ್ಬರು ಯುವತಿಯರ ಜತೆ ಆಗಿರುವ ಮದುವೆ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.